ರಾಜಕೀಯ

ಮಂಡ್ಯ ಜಿ.ಪಂ ಅಧ್ಯಕ್ಷೆಯಾಗಿ ಜೆಡಿಎಸ್‌ನ ಪ್ರೇಮಕುಮಾರಿ ಆಯ್ಕೆ

Vishwanath S

ಮಂಡ್ಯ: ಮಂಡ್ಯ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ನ ಸಂತೇಬಾಚಹಳ್ಳಿ ಕ್ಷೇತ್ರದ ಜೆ. ಪ್ರೇಮಕುಮಾರಿ ಆಯ್ಕೆಯಾಗಿದ್ದಾರೆ.

ಇನ್ನು ಜಿ.ಪಂನ ಉಪಾಧ್ಯಕ್ಷೆಯಾಗಿ ಬೂಕನಕೆರೆ ಕ್ಷೇತ್ರದ ಪಿ.ಕೆ ಗಾಯತ್ರಿ ರೇವಣ್ಣ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷೆ ಸ್ಥಾನ ಎಸ್ಟಿ ವರ್ಗಕ್ಕೆ ಮೀಸಲಿರಿಸಲಾಗಿತ್ತು.

ಈ ಮಧ್ಯೆ ಅಧ್ಯಕ್ಷಗಾಧಿ ಮೇಲೆ ಕಣ್ಣಿಟ್ಟಿದ್ದ ಚಾಮನಹಳ್ಳಿಯ ಪ್ರಬಲ ಆಕಾಂಕ್ಷಿ ಎಸ್. ನಾಗರತ್ನಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ವರಿಷ್ಠರ ಮಧ್ಯಸ್ಥಿಕೆಯಲ್ಲಿ ನಾಗರತ್ನ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ನಿರೀಕ್ಷೆಯಂತೆ ಪ್ರೇಮಕುಮಾರಿ ಅವರಿಗೆ 27 ಮತಗಳು ಲಭಿಸಿದ್ದು, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

SCROLL FOR NEXT