ಅಂಬರೀಷ್ 
ರಾಜಕೀಯ

ಸಂಪುಟ ಪುನರಚನೆ ವೇಳೆ ನನ್ನನ್ನು ಕೈಬಿಟ್ಟರೂ ಸಂತೋಷ: ಅಂಬರೀಷ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳೊಳಗೆ ಸಂಪುಟ ಪುನರಚನೆ ಮಾಡುತ್ತೇವೆ. ಪುನರಚನೆ ವೇಳೆ ಕೆಲವು ಸಚಿವರನ್ನು ಕೈಬಿಡಲಾಗುವುದು ಎಂದು...

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳೊಳಗೆ ಸಂಪುಟ ಪುನರಚನೆ ಮಾಡುತ್ತೇವೆ. ಪುನರಚನೆ ವೇಳೆ ಕೆಲವು ಸಚಿವರನ್ನು ಕೈಬಿಡಲಾಗುವುದು ಎಂದು ಹೇಳಿದ ಮಾರನೆ ದಿನವೇ ವಸತಿ ಸಚಿವ ಅಂಬರೀಷ್ ಅವರು, ಸಂಪುಟ ಪುನರಚನೆ ವೇಳೆ ನನ್ನನ್ನು ಕೈಬಿಟ್ಟರೂ ಸಂತೋಷ. ಸಚಿವನಾಗಿ ಮುಂದುವರೆಸಿದರೂ ಸಂತೋಷ ಎಂದು ಹೇಳುವ ಮೂಲಕ ಸಚಿವ ಸ್ಥಾನ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿರುವ ಸೂಚನೆ ನೀಡಿದ್ದಾರೆ.
ಇಂದು ಮಂಡ್ಯದಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅಂಬರೀಷ್, ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಟ್ಟರೂ ಸಂತೋಷ, ಮುಂದುವರೆಸಿದರು ಸಂತೋಷ ಎಂದರು.
ನಾನು ಈ ಹಿಂದೆ ಖಳನಟನಾಗಿ 400 ರುಪಾಯಿ ಸಂಭಾವನೆ ಪಡೆಯುತ್ತಿದ್ದೆ, ಆದರೆ ಕಾಂಗ್ರೆಸ್ ಪಕ್ಷ ನನ್ನನ್ನು ದೆಹಲಿ ಹಾಗೂ ರಾಜ್ಯದಲ್ಲಿ ಕೆಂಪು ಗೂಟದ ಕಾರಿನಲ್ಲಿ ಓಡಾಡುವಂತೆ ಮಾಡಿದೆ. ಅಷ್ಟೇ ಸಾಕು ನನಗೆ. ಈಗ ನಾನು ಸಚಿವ ಸಂಪುಟದಲ್ಲಿ ಇದ್ದರೂ ಅಷ್ಟೇ ಬಿಟ್ಟರು ಅಷ್ಟೇ ಎಂದು ಅಂಬರೀಷ್ ಹೇಳಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ಕೆಲವು ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ವರದಿಗಳು ಬಂದಾಗ ಅಂಬರೀಷ್ ಅವರ ಹೆಸರು ಸಹ ಪ್ರಮುಖವಾಗಿ ಕೇಳಿ ಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!