ರಾಜಕೀಯ

ಸಿದ್ದರಾಮಯ್ಯರಿಂದ ದುರ್ಬಲ ಹೈಕಮಾಂಡ್ ನ ದುರ್ಬಳಕೆ: ಶೆಟ್ಟರ್ ಆರೋಪ

Manjula VN

ಮೈಸೂರು: ದುರ್ಬಲ ಕಾಂಗ್ರೆಸ್ ಹೈ ಕಮಾಂಡ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಗುರುವಾರ ಆರೋಪಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಮ್ ಭಟ್ ಅವರ ಸುತ್ತ ಬಹುಕೋಟಿ ಅರ್ಕಾವತಿ ಡಿನೋಟಿಫಿಕೇಶನ್ ಮತ್ತು ಬಿಡಿಎ ಭೂ ಹಗರಣಗಳು ಸುತ್ತಿಕೊಂಡಿದೆ. ಇಂತಹವನ್ನು ಕೆಪಿಎಸ್ ಸಿ ಅಧ್ಯಕ್ಷರಾಗಿ ನೇಮಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಓರ್ವ ಸುಳ್ಳುಗಾರ ಎಂದು ಹೇಳಿದ್ದಾರೆ.

ಶ್ಯಾಂ ಭಟ್ ಅಭ್ಯರ್ಥಿಯಾಗಿ ನೇಮಕ ವಿಚಾರ ಇದೀಗ ಸಾಕಷ್ಟು ಚರ್ಚೆಯಲ್ಲಿರುವ ವಿಷಯವಾಗಿದೆ. ಸಾಕಷ್ಟು ಮಂದಿ ಈ ಕುರಿತಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೆಲವು ಆರ್ ಟಿಐ ಹೋರಾಗಾರರು ಕೂಡ ರಾಜ್ಯಪಾಲರ ಬಳಿ ಮನವಿ ಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಶ್ಯಾಂ ಭಟ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಸಿದ್ದರಾಮಯ್ಯ ಅವರು ದುರ್ಬಲ ಕಾಂಗ್ರೆಸ್ ಹೈ ಕಮಾಂಡ್ ನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.

ಇನ್ನು ಲೋಕಾಯುಕ್ತ ಮುಖ್ಯಸ್ಥ ಸ್ಥಾನಕ್ಕೆ ಎಸ್ ಆರ್ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದರೂ ಕೂಡ ಮತ್ತೆ ಅವರ ಹೆಸರನ್ನು ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಇದೊಂದು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ದೇವೇಗೌಡ ಅವರು ನೀಡಿದ್ದ ಪ್ರತಿಪಕ್ಷಗಳು ತಮ್ಮ ಕೆಲಸ ಮಾಡುವುದಲ್ಲಿ ವಿಫಲವಾಗಿದೆ ಎಂಬ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೇವೇಗೌಡ ಅವರು ಮೊದಲು ತಮ್ಮ ಪಕ್ಷದ ಕಡೆ ಗಮನಕೊಡಬೇಕಿದೆ. ಅವರ ಪಕ್ಷದ ಕೆಲವು ಶಾಸಕರು ಇಂದು ಕಾಂಗ್ರೆಸ್ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಬೇರೆ ಪಕ್ಷದವರ ಕಡೆ ಬೆಟ್ಟು ಮಾಡಿ ತೋರಿಸುವ ಬದಲು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT