ಮೈಸೂರು: 2 ಸಾವಿರ ನೋಟಿನ ಮುದ್ರಣ ಆಗುವ ವಿಚಾರ ನಾಲ್ಕು ತಿಂಗಳ ಹಿಂದೆಯೇ ತಿಳಿದಿತ್ತು ಎಂಬ ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿಕೆ ನಿಜವೇ ಆಗಿದ್ದರೆ ರಾಮದಾಸ್ ವಿರುದ್ದ ಸಿಬಿಐ ತನಿಖೆಯಾಗಬೇಕು ಕಾಂಗ್ರೆಸ್ ಆಗ್ರಹಿಸಿದೆ.
ಮೈಸೂರಿನ ಆರ್ ಬಿಐ ಕಚೇರಿ ಮುಂದೆ ಪ್ರತಿಭಟನಾ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಒಂದು ವೇಳೆ ರಾಮ ದಾಸ್ ಅವರಿಗೆ ನೋಟು ನಿಷೇಧದ ಬಗ್ಗೆ ಮೊದಲೇ ತಿಳಿದಿದ್ದರೇ ದೇಶಾದ್ಯಂತ ಇರುವ ಎಲ್ಲಾ ಬಿಜೆಪಿ ನಾಯಕರುಗಳಿಗೂ ಇದು ತಿಳಿದಿತ್ತು, ಹೀಗಾಗಿ ಅವರೆಲ್ಲರೂ ತಮ್ಮ ಬಳಿಯಿದ್ದ ಕಪ್ಪು ಹಣವನ್ನು ಯಶಸ್ವಿಯಾಗಿ ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಆ ಈ ಆರೋಪವನ್ನು ನಿರಾಕರಿಸಿರವ ರಾಮದಾಸ್, ನಾನು ಹೇಳಿದ್ದು 2ಸಾವಿರ ರೂ ನೋಟು ಮುದ್ರಣವಾಗುತ್ತದೆ ಎಂದು, ನನಗೆ ನೋಟುಗಳ ನಿಷೇಧದ ಬಗ್ಗೆ ಯಾವುದೇ ವಿಷಯ ಗೊತ್ತಿರಲಿಲ್ಲ, ನಾನೊಬ್ಬ ಸೈನಿಕನ ಮಗ, ದೇಶದ ಭದ್ರತೆ ಹಾಗೂ ರಕ್ಷಣೆ ಬಗ್ಗೆ ನನಗೂ ಕಾಳಜಿ ಇದೆ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.