ಬೆಂಗಳೂರು: ಮಾಧ್ಯಮಗಳ ವರದಿಯನ್ನಾಧರಿಸಿ ರಾಜ್ಯದ ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು ಗುಪ್ತಚರ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಭಾಷಣದ ವೇಳೆ ಸಿದ್ದರಾಮಯ್ಯ ಅವರು ಗುಪ್ತಚರ ಇಲಾಖೆ ಮಾಧ್ಯಮಗಳ ವರದಿಯನ್ನಾಧರಿಸಿ ಕೆಲಸ ಮಾಡುತ್ತಿದೆ. ಇದು ಹಾಗಾಗಬಾರದು, ಮುಂದೆ ಏನಾಗುತ್ತದೆ ಎನ್ನುವುದನ್ನು ಅವರು ಕಂಡು ಹಿಡಿಯಬೇಕು ಎಂದರು. ಅಲ್ಲದೆ ಗುಪ್ತಚರ ಇಲಾಖೆಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಅಗತ್ಯವಿದ್ದು, ನೇಮಕಾತಿಯ ವೇಳೆಯೂ ಸಮರ್ಥರನ್ನೇ ಆಯ್ಕೆ ಮಾಡಬೇಕಿದೆ ಎಂದರು.
ಇನ್ನು ತಮ್ಮ ಭಾಷಣದ ವೇಳೆ ವೇದಿಕೆ ಮೇಲೆ ಉಪಸ್ಥಿತರಿದ್ದ ರಾಜ್ಯಪಾಲ ವಾಜುಬಾಯಿ ವಾಲ ಅವರ ಹೆಸರನ್ನು ಹೇಳಲು ತಡಬಡಾಯಿಸಿದ ಘಟನೆ ನಡೆಯಿತು. ಗೌರವಾನ್ವಿತ... ರೂಡಾವಾಲರೆ ಎಂದು ಭಾಷಣ ಆರಂಭಿಸಿದ ಸಿಎಂ ಕೆಲ ಕಾಲ ಸುಮ್ಮನಿದ್ದು ಇನ್ವಿಟೇಷನ್ ಕೊಡುವಂತೆ ಕೇಳಿದ್ದಾರೆ ಬಳಿಕ ರಾಜ್ಯಪಾಲರೇ ಎಂದು ಭಾಷಣ ಮುಂದುವರೆಸಿದ್ದಾರೆ.