ಮಂಗಳೂರು: ಕಾವೇರಿ ಸಮಸ್ಯೆ ಬಗೆಹರಿಯ ಬೇಕೆಂದು ಬೇಡಿ ಗೋಕರ್ಣನಾಥ ಕ್ಷೇತ್ರದಲ್ಲಿ ಉರುಳು ಸೇವೆ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಯಾವುದೇ ಅಪಾಯಕಾರಿ ಘಟನೆಗಳು ನಡೆಯಬಾರದು ಮತ್ತು ರಾಜ್ಯದ ಜನತೆಯ ಹಿತ ಕಾಪಾಡಬೇಕು ಎಂದು ಹಾರೈಸಿ ಇದೇ 18ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಲಿದ್ದೇನೆ’ಈ ಉರುಳು ಸೇವೆಯಲ್ಲಿ ಸಿಎಂ ಸಿದ್ದರಾಮಯ್ಯ ನವರು ಭಾಗವಹಿಸುವ ಮೂಲಕ ಮಾದರಿಯಾಗಬೇಕೆಂದು ಅವರು ಹೇಳಿದ್ದಾರೆ.
6 ಕೋಟಿ ಜನರಿಗಾಗಿ ಉರುಳು ಸೇವೆ ಮಾಡುತ್ತಿದ್ದು, ಸಿದ್ದರಾಮಯ್ಯ ಅವರ ಒಳಿತಿಗಾಗಿಯೂ ಈ ಸೇವೆ ಮಾಡಲಿದ್ದೇನೆ ಎಂದರು. ಕಾವೇರಿ ವಿಚಾರದಲ್ಲಿ 3 ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ದುರ್ಘಟನೆಗಳು ನಡೆಯದಂತೆ ದೇವರ ಮೊರೆ ಹೋಗಬೇಕಾದದ್ದು ಎಲ್ಲರ ಕರ್ತವ್ ಎಂದು ತಿಳಿಸಿದ್ದಾರೆ.