ಮೋದಿ ಮತ್ತು ಮಹಾತ್ಮರಂತೆ ಕಾಣುವ ಸದಾನಂದ ನಾಯಕ್ ಮತ್ತು ಔ-ಗಸ್ಟಿನ್ ಅಲ್ಮೇಡಾ
ಮಂಗಳೂರು: ರಾಷ್ಟ್ರ ರಾಜಕೀಯದಲ್ಲಿ ಇದೀಗ ಗುಜರಾತ್ ವಿಧಾನಸಭೆ ಚುನಾವಣೆಯದ್ದೇ ಸುದ್ದಿ. ಅಲ್ಲಿನ ಚುನಾವಣಾ ಪ್ರಚಾರದ ವ್ಯವಸ್ಥಾಪಕರನ್ನು ಉಡುಪಿಯ ಇಬ್ಬರು ನಿವಾಸಿಗಳು ಆಕರ್ಷಿಸಿದ್ದಾರೆ. ಇವರು ಯಾವುದೇ ಪಕ್ಷದ ಮುಖಂಡರಲ್ಲ. ಆದರೆ ದೇಶದ ಪಿತಾಮಹ ಮಹಾತ್ಮಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವುದರಿಂದ ಇವರಿಗೆ ಭಾರೀ ಬೇಡಿಕೆಯಿದೆ. ಅವರೇ ಔ-ಗಸ್ಟಿನ್ ಅಲ್ಮೇಡಾ ಮತ್ತು ಸದಾನಂದ ನಾಯಕ್.
ಕೆಎಂಸಿ ಹಾಸ್ಟೆಲ್ ನಲ್ಲಿ ಅಡುಗೆ ಭಟ್ಟರಾಗಿ ಸದಾನಂದ ನಾಯಕ್ ಕೆಲಸ ಮಾಡುತ್ತಿದ್ದರೆ, ಅಲ್ಮೈಡಾ ವೆಲ್ಡರ್ ಯಂತ್ರದ ರಿಪೇರಿಗಾರ. ಇಬ್ಬರೂ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಇಬ್ಬರು ಗಣ್ಯ ವ್ಯಕ್ತಿಗಳನ್ನು ಹೋಲುತ್ತಿರುವುದರಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಇತ್ತೀಚೆಗೆ ಪ್ರಧಾನಿಯವರು ಧರ್ಮಸ್ಥಳಕ್ಕೆ ಬಂದಿದ್ದಾಗ ಇವರಿಬ್ಬರು ಧರ್ಮಸ್ಥಳದಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ಅದೇ ರೀತಿ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಕೂಡ ಭಾಗವಹಿಸಿದ್ದರು. ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಸಲಹೆ ಮೇರೆಗೆ ಅಹಮದಾಬಾದ್ ಗೆ ಹೋಗಿದ್ದರು.
ಅಲ್ಲಿಂದ ನಂತರ ಪಕ್ಷದ ಪ್ರಚಾರದಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಬಿಜೆಪಿ ನಾಯಕರ ಮಧ್ಯೆ ಸ್ಪರ್ಧೆ ಆರಂಭವಾಗಿದೆ. ಕಳೆದೊಂದು ವಾರದಲ್ಲಿ ಗುಜರಾತ್ ನಲ್ಲಿ 12ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಇವರು ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನಲ್ಲಿ ಇವರು ನಡೆಸುತ್ತಿರುವ ಪ್ರಚಾರ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಜನರಿಂದ ಸಿಗುವ ಪ್ರೀತಿ, ಗೌರವಕ್ಕೆ ಇಬ್ಬರೂ ಖುಷಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics