ಬೆಂಗಳೂರು: ಕರ್ನಾಟಕದ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ.ಪರಮೇಶ್ವರ ಅವರು, ಮತದಾರರನ್ನು ಪ್ರೇರೇಪಿಸಲು ಪ್ರತ್ಯೇಕ ಯಾತ್ರೆ ನಡೆಸಲು ಯೋಜಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಅವರ 'ನವ ಕರ್ನಾಟಕ ನಿರ್ಮಾಣ ಅಯಾತ್ರೆ' ಪ್ರಾರಂಭವಾದಾಗ, ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆ. ಸಿ. ವೇಣುಗೋಪಾಲ್ ಅವರೋಡನೆ ಪರಮೇಶ್ವರ್ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಸ್. ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖಾರ್ಗೆ ಮತ್ತು ಎಂ. ವೀರಪ್ಪ ಮೊಯಿಲಿ ಅವರು ಭಾಗವಹಿಸಿದ್ದರು. ಇದೀಗ ಪರಮೇಶ್ವರ್ ಅವರ ಯಾತ್ರೆ ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾಗಲಿದೆ.
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿ ಸಿದ್ದರಾಮಯ್ಯ ನಡೆಯುತ್ತಿರುವ ಯಾತ್ರೆ ತನ್ನ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸುವ ಪ್ರತ್ಯೇಕ ಯಾತ್ರೆಯಾಗಿದೆ. ಪರಮೇಶ್ವರ ನೇತೃತ್ವದ ಪ್ರತ್ಯೇಕ ಯಾತ್ರೆಯು 2013 ರಲ್ಲಿ ಕಾಂಗ್ರೆಸ್ ಕಳೆದುಕೊಂಡಿರುವ 100 ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಸಿದ್ದರಾಮಯ್ಯ ಅವರ ಪ್ರವಾಸ ಕಾಂಗ್ರೆಸ್ ನೇತೃತ್ವದ ಕ್ಷೇತ್ರಗಳನ್ನು ಸಹ ಒಳಗೊಂಡಿದೆ.
ಪರಮೇಶ್ವರ್ ಅವರ ನೇತೃತ್ವದ ಯಾತ್ರೆಯ ಮೊದಲ ಹಂತದಲ್ಲಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದ್ದು ಮುಳಬಾಗಿಲು, ಕೆಜಿಎಫ್, ಕೋಲಾರ, ಮಾಲೂರು, ಚಿಂತಾಮಣಿ, ಶಿಡ್ಲಘಟ್ಟ , ದೇವನಹಳ್ಳಿ ಮತ್ತು ನೆಲಮಾಂಗಲ ಕ್ಷೇತ್ರಗಳನ್ನು ಹಾದುಹೋಗಲಿದೆ.
ಇದೇ ವೇಳೆ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ತಯಾರಿಸಿದೆ ಎನ್ನುವುದು ಕೇವಲ ಊಹಾಪೋಹವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಕಾಂಗ್ರೆಸ್ ನಂತಹಾ ಪಕ್ಷದಲ್ಲಿ ದೀರ್ಘ ಪ್ರಕ್ರಿಯೆಯಾಗಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯಿಂದ ಅನುಮೋದನೆ ಪಡೆದ ಬಳಿಕ ಈ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos