ರಾಜಕೀಯ

ಜಿಟಿ ದೇವೇಗೌಡ ಪುತ್ರನ ವಿರುದ್ಧ ಕಎಚ್ ಬಿ ಭೂ ಖರೀದಿ ಪ್ರಕರಣ: ಸಿಎಂ ಕುತಂತ್ರ ಎಂದ ಕುಮಾರಸ್ವಾಮಿ

Raghavendra Adiga
ಬೆಂಗಳುರು: "ಜೆಡಿ(ಎಸ್) ನಲ್ಲಿ ತನ್ನ ಪ್ರಭಾವದ ಕಾರಣ ಬೆಳೆಯುತ್ತಿರುವ ನಾಯಕ ಜಿಟಿ ದೇವೇಗೌಡ ಅವರನ್ನು ಮಟ್ಟ ಹಾಕಲು ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವನ್ನು ಸಿದ್ದರಾಮಯ್ಯ ಮತ್ತು ಕೆಂಪಯ್ಯ ತಮಗೆ ಬೇಕಾದಂತೆ ಬಳಸಿಕೊಲ್ಳುತ್ತಿದ್ದಾರೆ" ಎಂದು ಜೆಡಿ(ಎಸ್) ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ "ಸಿದ್ದರಾಮಯ್ಯ ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ಉಳಿಯಲಾರರು. ಇನ್ನು ಮೂರುವರೆ ತಿಂಗಳಿಂಗೆ ಚುನಾವಣೆ ಇದೆ. ಆ ಬಳಿಕ ಯಾವ ಪರಿಸ್ಥಿತಿ ಬರಲಿದೆ ಎನ್ನುವುದು ಗೊತ್ತಿರಬೇಕು. ಕರ್ನಾಟಕ ಗೃಹ ಮಂಡಳಿ ಭೂ ಖರೀದಿ ಪ್ರಕರಣ ಇದಾಗಲೇ ಮುಗಿದ ಅದ್ಯಾಯ. ಬಿಜೆಪಿ ಆಡಳಿತಾವಧಿಯಲ್ಲೇ ಇದರ ತನಿಖೆ ನಡೆದಿದ್ದು ಆರೋಪದಲ್ಲಿ ಸತ್ಯಾಂಶ ಇಲ್ಲವೆಂದು ಸಾಬೀತಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಎಸಿಬಿ ತನಿಖೆ ಕೈಗೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿದ್ದು ಸಿದ್ದರಾಮಯ್ಯಗೆ ಈಗಿನಿಂದಲೇ ಸೋಲುವ ಭೀತಿ ಎದುರಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಎಸಿಬಿ ಮೊರೆ ಹೋಗಿದ್ದಾರೆ " ಎಂದರು.
"ಭೂ ಖರೀದಿ ಪ್ರಕರಣ ಸಂಬಂಧ ಎಸಿಬಿ ಸೋಮವಾರ ಎಫ್‌ಐಆರ್‌ ದಾಖಲಿಸಿದ್ದು ಅದರಲ್ಲಿ ದೇವೇಗೌಡರ ಹೆಸರಿನ ಬದಲು ಅವರ ಮಗ ಹರೀಶ್ ಗೌಡ ಹೆಸರಿದೆ. ಇದು ಸಿದ್ದರಾಮಯ್ಯನವರ ತಂತ್ರದ ಭಾಗ" ಎಂದ ಕುಮಾರಸ್ವಾಮಿ ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ 2000 ಕೋಟಿ ಹಗರಣದ ಬಗ್ಗೆ  ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಎಂದರು.
SCROLL FOR NEXT