ರಾಜಕೀಯ

ದಲಿತರ ಮನೆಯಲ್ಲಿ ಊಟ: ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ಹೊಸ ಸವಾಲು

Shilpa D
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದಲಿತರ ಮನೆಯಲ್ಲಿ ಊಟ ಮಾಡಿದ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಹೊಸ ಸವಾಲು ಹಾಕಿದ್ದಾರೆ.
ನಿಜವಾಗಿಯೂ ಯಡಿಯೂರಪ್ಪಗೆ ಸಾಮಾಜಿಕ ಸಬಲೀಕರಣದಲ್ಲಿ ನಂಬಿಕೆಯಿದ್ದರೇ ಅವರ ಕುಟುಂಬದ ಸದಸ್ಯರೊಬ್ಬರು ದಲಿತ ಕುಟುಂಬದವರೊಬ್ಬರನ್ನು ವಿವಾಹವಾಗಲಿ ಎಂದು ಆಗ್ರಹಿಸಿದ್ದಾರೆ. 
ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್‍ನಲ್ಲಿ 65 ಎಂಎಲ್‍ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಮಾತು ಎತ್ತಿದ್ರೆ ದಲಿತರ ಮನಗೆ ಹೋಗಿ ಊಟ ಮಾಡ್ತೀನಿ ಅಂತಾರೆ, ಇಷ್ಟು ದಿನ ದಲಿತರ ಮನೆಯಲ್ಲಿ ಊಟ ಮಾಡಿದ್ದು ಸಾಕು, ದಲಿತರ ಮೇಲೆ ಪ್ರೀತಿ ಇದ್ದರೆ ಅವರ ಹೆಣ್ಣು ಮಕ್ಕಳನ್ನು ಇವರ ಮನೆಗೆ, ಇವರ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ಕೊಟ್ಟು ಮದುವೆ ಮಾಡಲಿ. ಕೇವಲ ದಲಿತರ ಬಗ್ಗೆ ಅವ್ರು ನಾಟಕ ಮಾಡ್ತಿದ್ದಾರೆ ಅಂತ ಬಿಎಸ್‍ವೈ ವಿರುದ್ಧ ಕಿಡಿಕಾರಿದರು.
ನಮ್ಮ ಸರ್ಕಾರ ಬಂದ ಮೇಲೆ ಇಂತಹ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬೆಂಗಳೂರಿನಲ್ಲಿ 1800 ಎಂಎಲ್‍ಡಿ ನೀರು ಸರಬರಾಜು ಆಗುತ್ತೆ. 1440 ಎಂಎಲ್‍ಡಿ ನೀರು ತ್ಯಾಜ್ಯ ನೀರು ಬರುತ್ತೆ. ತ್ಯಾಜ್ಯ ನೀರು ಸಂಸ್ಕರಣೆ ಇವತ್ತು ಅವಶ್ಯಕ ಹಾಗಾಗಿ ನೀರು ಸಂಸ್ಕರಣೆ ಮಾಡದೇ ಇದ್ರೆ ಸಮಸ್ಯೆ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
SCROLL FOR NEXT