ಮೈಸೂರು: ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸನ್ನಿಧಾನಕ್ಕೆ ಆಗಮಿಸಿದ್ದ ಹೆಚ್.ಡಿ.ರೇವಣ್ಣ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಂಪತಿಗಳ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ರಾಜಕೀಯದಲ್ಲಿ ಸ್ಪರ್ಧಿಗಳಾಗಿದ್ದರೂ ಭೀಮನ ಅಮವಾಸ್ಯೆಯ ದಿನವಾಗಿದ್ದ ನಿನ್ನೆ ಎಸ್.ಎಂ.ಕೃಷ್ಣ ಹಾಗೂ ರೇವಣ್ಣ ಅವರು ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸನ್ನಿಧಾನದಲ್ಲಿ ಒಟ್ಟಿಗೆ ಸೇರಿದ್ದು ವಿಶೇಷವಾಗಿತ್ತು.
ಅಮವಾಸ್ಯೆ ಹಿನ್ನಲೆಯಲ್ಲಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೇ ಸಮಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಸ್ ಕೃಷ್ಮ ದಂಪತಿಗಳು ಕೂಡ ಆಗಮಿಸಿದ್ದರು. ಎಸ್.ಎಂ.ಕೃಷ್ಣ ದಂಪತಿಗಳು ಆಗಮಿಸಿದ ವಿಚಾರ ತಿಳಿದ ರೇವಣ್ಣ ಅವರು ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ, ಪೂಜೆ ಬಳಿಕ ರೇವಣ್ಮ ದಂಪತಿಗಳು ಎಸ್.ಎಂ.ಕೃಷ್ಣ ದಂಪತಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು.