ರಾಜಕೀಯ

ಗುಜರಾತ್ ಶಾಸಕರು ಅವರ ಇಚ್ಛೆಗೆ ವಿರುದ್ಧವಾಗಿ ರೆಸಾರ್ಟ್ ನಲ್ಲಿ ಉಳಿದುಕೊಂಡಿಲ್ಲ: ಡಿ.ಕೆ. ಸುರೇಶ್

Shilpa D
ಬೆಂಗಳೂರು: ಗುಜರಾತ್ ಕಾಂಗ್ರೆಸ್ ಶಾಸಕರನ್ನು ಅವರ ಇಚ್ಛೆಯ  ವಿರುದ್ಧವಾಗಿ ರೆಸಾರ್ಟ್ ನಲ್ಲಿ ಇರಿಸಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಸ್ಪಷ್ಟ ಪಡಿಸಿದ್ದಾರೆ. 
ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು  ಬೆಂಗಳೂರಿನ ಬಿಡದಿ ಬಳಿ ರೆಸಾರ್ಟ್ ನಲ್ಲಿ  ಬಲವಂತವಾಗಿ ಇರಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್ ಎಲ್ಲಾ ಶಾಸಕರ ಸ್ವತಂತ್ರ್ಯವಾಗಿ ಹೊರಗೆ ಒಳಗೆ ಓಡಾಡಿಕೊಂಡಿದ್ದಾರೆ. ನಾವು ಯಾರೊಬ್ಬರಿಗೂ ಆಕ್ಷೇಪಣೆ ಮಾಡಿಲ್ಲ ಎಂದು ಹೇಳಿದ್ದಾರೆ.
ಹಳೇಯ ಪಕ್ಷವಾದ ಕಾಂಗ್ರೆಸ್ ಪೂರ್ಣವಾಗಿ ಸೋತಿದೆ. ಒಬ್ಬ ವ್ಯಕ್ತಿಯ ಗೆಲುವಿಗಾಗಿ ಇಡೀ ಕಾಂಗ್ರೆಸ್ ಹೋರಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಗೆ ನಾಯಕತ್ವ ಇಲ್ಲ,  ಅದರದ್ದೇ ಸದಸ್ಯರು ಪಕ್ಷದ ಅಭ್ಯರ್ಥಿಯನ್ನು ನಂಬುತ್ತಿಲ್ಲ ಎಂದು ಗುಜರಾತ್ ಬಿಜೆಪಿ ಅಧ್ಯಕ್ಷ ಜಿತು ವಾಗಾನಿ ಟೀಕಿಸಿದ್ದಾರೆ.
ಪ್ರವಾಹದಿಂದಾಗಿ ಗುಜರಾತ್ ನಲುಗಿ ಹೋಗಿದೆ, ಇಂಥಹ ವೇಳೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಜೀವ ಭಯವಿದೆ. ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನಿಸಿ ಪ್ರತಿ ಶಾಸಕರಿಗೆ 15 ಕೋಟಿ ರೂ ಆಫರ್ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಸಂಬಂಧ ಬೆಂಗಳೂರಿನಲ್ಲಿ ಗುಜರಾತ್ ಕಾಂಗ್ರೆಸ ಶಾಸಕರು ಮಾಧ್ಯಮದ ಮುಂದೆ ಪರೇಡ್ ನಡೆಸಿದ್ದವು,ಕೆಲವೇ ಕೆಲವು ಮತಕ್ಕಾಗಿ ತಮ್ಮನ್ನು ಅಪಹರಿಸುವ ಅಥವಾ ಹತ್ಯೆ ಮಾಡುವ ಭಯದಿಂದ  ಇಲ್ಲಿಗೆ ಬಂದಿದ್ದೇವೆ ಎಂದು ಶಕ್ತಿಸಿನ್ಙ್ ಗೋಹಿಲ್  ಗಂಭೀರ ಆರೋಪ ಮಾಡಿದ್ದರು. 
SCROLL FOR NEXT