ರಾಜಕೀಯ

ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಗೆ ರಾಜಾಜಿನಗರದಲ್ಲಿ ವಾಸ್ತು ಅನುಸಾರ ಮನೆ

Shilpa D
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಅವರಿಗೆ ರಾಜಾಜಿನಗರದಲ್ಲಿ ಮೂರು ಕೊಠಡಿಗಳುಳುಳ್ಳ ಮನೆ ಕಾಯ್ದಿರಿಸಲಾಗಿದ್ದು, ಜುಲೈನಲ್ಲಿ ಶಿಫ್ಟ್ ಆಗಲಿದ್ದಾರೆ.
ಮುಂಬರುವ  ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಚ್ಚಿನ ಸಮಯವನ್ನು ಕರ್ನಾಟಕಕ್ಕೆ ಮೀಸಲಿಡುವಂತೆ ಮುರುಳೀಧರ ರಾವ್ ಅವರಿಗೆ ಆದೇಶಿಸಿದ್ದಾರೆ. ಜೊತೆಗೆ ಚುನಾವಣೆ ಸಂಬಂದಿತ ಎಲ್ಲಾ ಕಾರ್ಯತಂತ್ರಗಳನ್ನು ಬೆಂಗಳೂರಿನಲ್ಲಿದ್ದುಕೊಂಡಿ ರೂಪಿಸುವಂತೆ ಸೂಚಿಸಿದ್ದಾರೆ.
ವಾಸ್ತು ಅನುಸಾರ ಎಲ್ಲವೂ ಸರಿಯಾಗಿರುವ 3 ಕೊಠಡಿಗಳುಳ್ಳ ಎರಡು ಅಂತಸ್ತಿನ ಮನೆಯನ್ನು ರಾಜಾಜಿನಗರದ ಎನ್ ಬ್ಲಾಕ್ ನಲ್ಲಿ ಮುರುಳಿಧರ ರಾವ್ ಅವರಿಗಾಗಿ ಕಾಯ್ದಿರಿಸಲಾಗಿದೆ. ಈ ಮನೆಯಲ್ಲಿ ಸಣ್ಣ ಪುಟ್ಟ ಸಭೆ, ಅಥವಾ ವಿಡಿಯೋ ಕಾನ್ಫರೆನ್ಸ್ ಮಾಡಲು ಅನುಕೂಲ ಕಲ್ಪಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನಿರಂತರ ಸಭೆ ಹಾಗೂ  ಕಾರ್ಯಕರ್ತರ ಜೊತೆ ರಾಜ್ಯ ಪ್ರವಾಸ ಮಾಡುವಂತೆ ಜೊತೆಗೆ ರಾಜ್ಯ ನಾಯಕರಲ್ಲಿ ಉಂಟಾಗುವ ಭಿನ್ನಮತಗಳನ್ನು ಬಗೆಹರಿಸುವಂತೆ ಮುರುಳೀಧರ ರಾವ್ ಗೆ ಅಮಿತ್ ಶಾ ಸೂಚಿಸಿದ್ದಾರೆ, ಆಗಸ್ಟ್ 3 ರಂದು ಅಮಿತ್ ಶಾ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ಅಮಿತ್ ಶಾ ಗೂ ಉಳಿದು ಕೊಳ್ಳಲು ಸೂಕ್ತ ನಿವಾಸ ಗುರುತಿಸುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿಗೆ ಕೆ.ಪಿ ನಂಜುಂಡಿ ಸೇರ್ಪಡೆ
ಅಖಿಲ ಭಾರತ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ,  ಕೆ.ಪಿ ನಂಜುಂಡಿ ಕಾಂಗ್ರೆಸ್ ತೊರೆದು ಅಧಿಕೃತವಾಗಿ ಸೋಮವಾರ ಬಿಜೆಪಿ ಸೇರ್ಪಡೆಗೊಂಡರು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯಗಳ  ಮುಖಂಡರು ಬಿಡೆಪಿ ಸೇರಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
SCROLL FOR NEXT