ಬಿ.ಎಸ್.ಯಡಿಯೂರಪ್ಪ 
ರಾಜಕೀಯ

ಗೋಮಾಂಸ ತಿನ್ನುವವರು ಮನೆಯಲ್ಲಿ ತಿಂದು ಸಾಯಲಿ: ಬಿಎಸ್ ವೈ ಆಕ್ರೋಶ

ಮೈಸೂರಿನ ಕಲಾಮಂದಿರದಲ್ಲಿ ಬಹಿರಂಗವಾಗಿ ಗೋ ಮಾಂಸ ಸೇವಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ....

ಬಳ್ಳಾರಿ: ಮೈಸೂರಿನ ಕಲಾಮಂದಿರದಲ್ಲಿ ಬಹಿರಂಗವಾಗಿ ಗೋ ಮಾಂಸ ಸೇವಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗೋಮಾಂಸ ತಿನ್ನುವವರು ಮನೆಯಲ್ಲಿ ತಿಂದು ಸಾಯಲಿ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ಗೋ ಮಾಂಸ ಸೇವನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗೋ ಮಾಂಸವನ್ನು ಮನೆಯಲ್ಲಿ ಬೇಕಾದರೆ ತಿಂದು ಸಾಯಲಿ. ಆದರೆ ಸಾರ್ವಜನಿಕವಾಗಿ ಗೋ ಮಾಂಸ ತಿಂದಿರುವುದು ಅಕ್ಷಮ್ಯ ಅಪರಾಧ, ಇದನ್ನು ಯಾರೊಬ್ಬರು ಕ್ಷಮಿಸಲ್ಲ ಎಂದರು.
ಕಲಾ ಮಂದಿರದಲ್ಲಿ ಗೋ ಮಾಂಸ ತಿಂದವರನ್ನು ಬಹಿಷ್ಕರಿಸಬೇಕು. ಇದು ಸಾರ್ವಜನಿಕರಿಗೆ ಮಾಡಿದ ಅಪಮಾನ. ಗೋ ಮಾಂಸ ಸೇವಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿನ್ನೆ ಮೈಸೂರಿನ ಕಲಾಮಂದಿರದಲ್ಲಿ ಚಾರ್ವಾಕ ಸೋಶಿಯಲ್ ಅಂಡ್ ಕಲ್ಚರಲ್ ಟ್ರಸ್ಟ್ ಎವಿಎಸ್ ಎಸ್ ಸಂಸ್ಥೆ ಆಯೋಜಿಸಿದ್ದ ಆಹಾರದ ಹಕ್ಕು ವ್ಯಕ್ತಿ ಸ್ವಾತಂತ್ರ್ಯ ವಿಷಯದ ಸಂವಾದದ ಕಾರ್ಯಕ್ರಮದಲ್ಲಿ ಪ್ರೊ.ಮಹೇಶ್ ಚಂದ್ರ ಗುರು ಸೇರಿದಂತೆ ಹಲವರು ಗೋಮಾಂಸ ಸೇವಿಸಿದ್ದರು. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಬಹಿರಂಗವಾಗಿ ಗೋ ಮಾಂಸ ಸೇವಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಕಾರ್ಯಕರ್ತರು ಮೈಸೂರಿನ ಎಸ್ ಟಿಎಫ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT