ರಾಜಕೀಯ

ಉಪ ಚುನಾವಣೆ ಫಲಿತಾಂಶ ಕೋಮುವಾದಿಗಳ ವಿರುದ್ಧದ ತೀರ್ಪು: ಸಚಿವ ಮಹಾದೇವಪ್ಪ

Shilpa D

ಮೈಸೂರು: ನಂಜನಗೂಡು ವಿಧಾನಸಭೆ ಉಪ ಚುನಾವಣೆ ದಿನ ದಿನಕ್ಕೂ ರಂಗೇರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮತ್ತು ಮಾಜಿ ಸಚಿವ ವಿ.ಸೋಮಣ್ಣ ಲಿಂಗಾಯತ ಮತಗಳನ್ನು ಕ್ರೂಢೀಕರಿಸಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್ ತಮ್ಮ ಪಕ್ಷದಲ್ಲಿರುವ ಲಿಂಗಾಯತ ಮುಖಂಡರನ್ನು ಹೊರಳವಾಡಿಗೆ ಕರೆತಂದು ಪ್ರಚಾರ ಮಾಡಿಸುತ್ತಿದೆ. ಸಂಸದ ಧ್ರುವನಾರಾಯಣ ಹೊರಳವಾಡಿ ಮತ್ತು ಬದನವಾಳು ಗ್ರಾಮಗಳಿಗೆ ಲಿಂಗಾಯತ ಮುಖಂಡರನ್ನು ಸ್ವಾಗತಿಸಿದ್ದಾರೆ.

ಸರ್ಕಾರ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರು ಗಳ ಅನುದಾನ ನೀಡಿದೆ ಎಂದ ವೀರಶೈಲ ಮುಖಂಡ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಲೋಕೋಪಯೋಗಿ ಸಚಿವ ಎಚ್. ಸಿ ಮಹಾದೇವಪ್ಪ, ಅರಿಯೂರ್, ಮಡಕೆ ಹುಂಡಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ, ನಂಜನಗೂಡು ಅಭಿವೃದ್ಧಿಯನ್ನು ಕಡೆಗಣಿಸಿರುವ ಶ್ರೀನಿವಾಸ್ ಪ್ರಸಾದ್ ಅವರನ್ನು ಜನತೆ ತಿರಸ್ಕರಿಸಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಕಳೆದ 8 ವರ್ಷಗಳಿಂದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ, ಸರ್ಕಾರದ ಜಾತ್ಯಾತೀತ ವಾದದ ಬದ್ಧತೆಗೆ ಜನ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಉಪ ಚುನಾವಣೆ ಫಲಿತಾಂಶ ಕೋಮುವಾದಿಗಳ ವಿರುದ್ಧದ ತೀರ್ಪು ಆಗಿರುತ್ತದೆ ಎಂದು ಮಹಾದೇವ ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT