ಈಶ್ವರಪ್ಪ, ಅಮಿತ್ ಶಾ, ಯಡಿಯೂರಪ್ಪ 
ರಾಜಕೀಯ

ರಾಜ್ಯ ಬಿಜೆಪಿ ಬಿಕ್ಕಟ್ಟು: ಉಭಯ ಬಣಗಳಿಗೂ ಕಠಿಣ ಸಂದೇಶ ಸಾಧ್ಯತೆ

ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟು ಶಮನಕ್ಕೆ ಸಂಬಂಧ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ವರಿಷ್ಠರಿಗೆ ವರದಿ ನೀಡಿದ್ದಾರೆ. ಶೀಘ್ರವೇ ಸಮಸ್ಯೆ ...

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟು ಶಮನಕ್ಕೆ ಸಂಬಂಧ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ವರಿಷ್ಠರಿಗೆ ವರದಿ ನೀಡಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಕೂಡ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರಿಗೂ ಹೈಕಮಾಂಡ್ ಎಚ್ಚರಿಕೆ ನೀಡುವ ಸಾಧ್ಯತೆಯಿದೆ.
ಬಿಜೆಪಿ ಉಳಿಸಿ ಸಮಾವೇಶದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಪಕ್ಷದ ವರಿಷ್ಠರ ಮಾತುಗಳನ್ನು ಧಿಕ್ಕರಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ಹಾಗೂ ಕೆಟ್ಟ ಪದಗಳನ್ನು ಬಳಸಿರುವ ಸಂಬಂಧ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಅಮಿತ್ ಶಾಗೆ ವರದಿ ನೀಡಿದ್ದಾರೆ.
ಇನ್ನೂ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು , ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒಂದೇ ಕಣ್ಣಿನಲ್ಲಿ ಅಳುತ್ತಿರುವ ಯಡಿಯೂರಪ್ಪ ಅವರ ವರ್ತನೆ ಬಗ್ಗೆ ಹೈ ಕಮಾಂಡ್ ನಿಗಾ ವಹಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಯಡಿಯೂರಪ್ಪ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸುವಲ್ಲಿ ಈಶ್ವರಪ್ಪ ಬಣ ಯಶಸ್ವಿಯಾಗಿದೆ, ಭಿನ್ನಮತೀಯ ನಾಯಕರು ಪಕ್ಷದಲ್ಲಿ ಯಾವುದೇ ಹುದ್ದೆ ಆಕಾಂಕ್ಷಿಗಳಾಗಿಲ್ಲ, ಅಥವಾ ಯಾವುದೇ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿಲ್ಲ, ಯಡಿಯೂರಪ್ಪ ಅವರು ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳೂಬೇಕೆಂಬುದೇ ಅವರ ಒಕ್ಕೊರಲ ಆಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಅವಶ್ಯಕವಾಗಿರುವ ಸಿದ್ಧತೆಗಳನ್ನು ರಾಜ್ಯ ಬಿಜೆಪಿ ನಾಯಕರು ಮಾಡುತ್ತಿದ್ದಾರೆ, ಆದರೆ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಅವರಿಗೆ ಪಕ್ಷದ ಸೂಚನೆಯಂತೆ ಕಾರ್ಯನಿರ್ವಹಿಸಲು ಮತ್ತೊಂದು ಅವಕಾಶ ನೀಡಬೇಕು ಎಂಬುದು ಹಲವು ನಾಯಕರ ಬೇಡಿಕೆಯಾಗಿದೆ.
ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಕೆಲ ನಾಯಕರು, ಯಾವುದೇ ತೀರ್ಮಾನ ಕೈಗೊಳ್ಳುವಾಗ ಹಿರಿಯ ಮುಖಂಡರ ಜೊತೆ ಚರ್ಚಿಸದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ, ಎಲ್ಲದಕ್ಕೂ ತಮ್ಮ ಆಪ್ತೆ ಶೋಭಾ ಕರಂದ್ಲಾಜೆ ಅವರನ್ನೆ ಅವಲಂಬಿಸಿರುವ ಯಡಿಯೂರಪ್ಪ, ಎಲ್ಲಾ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಶೋಭಾ ಕರಂದ್ಲಾಜೆಗೆ ನೀಡಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಯಡಿಯೂರಪ್ಪ ಅವರನ್ನು ಮುಂದಿನ ವಿಧಾನ ಸಭೆ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರುವ ಕಾರಣ ಬೇರೊಬ್ಬ ನಾಯಕನ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಪಕ್ಷಕ್ಕೆ ಮನಸ್ಸಿಲ್ಲ. 
ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಕರೆದು ಕಠಿಣ ಸಂದೇಶ ರವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ, ಜೊತೆಗೆ ಇಬ್ಬರು ನಾಯಕರು ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೇ ಇಬ್ಬರಿಗೂ ವಾರ್ನಿಂಗ್ ನೀಡಲಾಗುತ್ತದೆ.
ಪಕ್ಷದ ಆಂತರಿ ವಿಷಯಗಳ ಹಿತದೃಷ್ಟಿಯಿಂದ ಈಶ್ವರಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಷೇಧಿಸುವಂತೆ ಹೇಳುವ ಸಾಧ್ಯತೆಯಿದೆ. ಇನ್ನೂ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಯಡ್ಯೂರಪ್ಪಗೆ ಆದೇಶಿಸುವ ಸಾಧ್ಯತೆಯಿದೆ.
ಪ್ರತಿ ತಿಂಗಳು ಕೋರ್ ಕಮಿಟಿ ಸಭೆ, ಈಶ್ವರಪ್ಪ ಸೇರಿದಂತೆ ಎಲ್ಲಾ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!