ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಕೈ ಜೋಡಿಸಿದರೇ ಕಠಿಣ ಕ್ರಮ: ಪೊಲೀಸರಿಗೆ ಸಿಎಂ ಎಚ್ಚರಿಕೆ
ನಗರದ ಹೊರವಲಯದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹೀಗಾಗಿ ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಪೊಲೀಸರ ಸಹಾಯ ಪಡೆದು ವ್ಯವಹರಿಸುತ್ತಿರುವುದು ..
ಬೆಂಗಳೂರು: ನಗರದ ಹೊರವಲಯದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹೀಗಾಗಿ ರಿಯಲ್ ಎಸ್ಟೇಟ್ ವ್ಯವಹಾರಸ್ಥರು ಪೊಲೀಸರ ಸಹಾಯ ಪಡೆದು ವ್ಯವಹರಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಯಾವ ಪೊಲೀಸ್ ಸಿಬ್ಬಂದಿ ರಿಯಲ್ ಎಸ್ಟೇಟ್ ಉದ್ಯಮಿಗಳು ಜೊತೆ ಕೈ ಜೋಡಿಸಿದರೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ವೈಟ್ ಫೀಲ್ಡ್ ನಲ್ಲಿ ಪೊಲೀಸ್ ಡಿವಿಷನ್ ಉದ್ಘಾಟಿಸಿ ಮಾತನಾಡಿದ ಅವರು, ಭೂ ಕಬಳಿಕೆದಾರರ ಜೊತೆ ಪೊಲೀಸರು ಕೈ ಜೋಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ, ಡಿ.ವಿ ಸದಾನಂದಗೌಡ ಹಾಜರಿದ್ದರು.
ವೈಟ್ ಪೀಲ್ಡ್ ವಿಭಾಗ ಕಾಡುಗೋಡಿ, ಕೆ.ಆರ್ ಪುರ, ಮಹದೇವಪುರ ಮತ್ತು ಮಾರತ್ ಹಳ್ಳಿ, ಬೆಳ್ಳಂದೂರು, ವರ್ತೂರು ಮತ್ತು ಎಚ್ ಎಎಲ್ ಪೊಲೀಸ್ ಪೊಲೀಸ್ ಠಾಣೆಗಳು ಇದರ ವ್ಯಾಪ್ತಿಗೆ ಬರುತ್ತವೆ.