ಸಾಂದರ್ಭಿಕ ಚಿತ್ರ 
ರಾಜಕೀಯ

ಮೌಢ್ಯ ನಿಷೇಧ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಲಾಯಿತು: ವಿರೋಧ ಪಕ್ಷದ ನಾಯಕರು

3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು...

ಬೆಳಗಾವಿ: 3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು ಎಂದು ವಿರೋಧ ಪಕ್ಷಗಳ ನಾಯಕರು ಗುರುವಾರ ಹೇಳಿದ್ದಾರೆ. 
ಮೌಢ್ಯ ನಿಷೇಧ ವಿಧೇಯಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಿ.ಆರ್. ಪಾಟೀಲ್ ಅವರು, ಪ್ರಗತಿಪರ ಚಿಂತಕರ ಒತ್ತಡಗಳಿಂದಾಗಿ ಸರ್ಕಾರ ವಿಧೇಯಕವನ್ನು ತರಾತುರಿಯಲ್ಲಿ ಜಾರಿಗೆ ತಂದಿತು ಎಂದು ಹೇಳಿದ್ದಾರೆ. 
ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಮಾತನಾಡಿ, ನಂಬಿಕೆ ಕುರಿತ ವ್ಯಾಖ್ಯಾನ ಸಂಕೀರ್ಣವಾದದ್ದು, ನಂಬಿಕೆಯೆಂಬುದು ಸಮಯದೊಂದಿದೆ ಬದಲಾಗುತ್ತದೆ. ಹೀಗಾಗಿ ವಿಧೇಯಕ ಕುರಿತು ತಜ್ಞರು ಹಾಗೂ ಸಂಬಂಧ ಪಟ್ಟಂತಹ ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಅಗತ್ಯವಿತ್ತು. ಆದರೆ, ಚರ್ಚೆ ನಡೆಸುವುದಕ್ಕೂ ಮುನ್ನವೇ ವಿಧೇಯಕ ಅನುಮೋದನೆ ಪಡೆದುಕೊಂಡಿತು. ಆದರೆ, ವಿಧೇಯಕದ ವಿರುದ್ಧ ನಾನಿಲ್ಲ ಎಂದು ಹೇಳಿದ್ದಾರೆ. 
ಜೆಡಿಎಸ್ ನಾಯಕ ವೈಎಸ್'ವಿ ದತ್ತಾ ಮಾತನಾಡಿ, ಇಂತಹ ವಿಧೇಯಕರವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಜನರದಲ್ಲಿರುವ ಮೂಲಭೂತ ಚಿಂತನೆಗಳನ್ನು ಹೆಚ್ಚಿಸಬೇಕು. ಆದರೆ, ಸರ್ಕಾರ ಜಾರಿಗೆ ತಂದಿರುವ ವಿಧೇಯಕದಿಂದ ದೊಡ್ಡ ಕ್ರಾಂತಿಯೇನೂ ಆಗುವುದಿಲ್ಲ ಎಂದಿದ್ದಾರೆ. 
ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಅವರು ಮಾತನಾಡಿ, ಕಾಗೆ ಕುಳಿತ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರನ್ನು ಬದಲಾಯಿಸಿದ್ದರು. ಕಾರು ಬದಲಾಯಿಸಿದ ಬಳಿಕ ಕಾಕತಾಳೀಯವೆಂಬಂತೆ ತಾವು ಈ ಮೊದಲೇ ಕಾರನ್ನು ಬದಲಿಸಬೇಕು ಎಂದುಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ನನ್ನ ಕಾರಿನ ಮೇಲೆ 20 ಕಾಗೆಗಳು ಕುಳಿತುಕೊಳ್ಳಲಿ. ನಾನು ನನ್ನ ಕಾರನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಮಾಟಮಂತ್ರ ಮತ್ತು ವಾಮಾಚಾರಗಳಂತಹ ಮೂಢನಂಬಿಕೆಗಳಿಗೆ ಹಿಂದುಳಿದ ವರ್ಗದ ಜನರೇ ಹೆಚ್ಚು ಬಲಿಯಾಗುತ್ತಿದ್ದು, ವಿಧೇಯಕ ಕುರಿತಂತೆ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT