ರಾಜಕೀಯ

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಡಿನೋಟಿಫೈ ಬ್ರಹ್ಮಾಸ್ತ್ರ!

Vishwanath S
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಬಿಜೆ ಪುಟ್ಟಸ್ವಾಮಿ ಅವರು ಭೂಹಗರಣದ ಪ್ರಕರಣವನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. 
ಬಿಜೆ ಪುಟ್ಟಸ್ವಾಮಿ ಅವರು ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರು 300 ಕೋಟಿ ರುಪಾಯಿಗಳ ಭೂಹಗರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಭೂಪಸಂದ್ರದಲ್ಲಿ ಸರ್ವೇ ನಂಬರ್ 20ರಲ್ಲಿ 6.26 ಎರಕೆಯನ್ನು ವಸತಿ ಪ್ರದೇಶದ ಸೃಷ್ಟಿಗೆ ಯೋಗ್ಯ ಎಂದು 1982ರಲ್ಲಿ ಸೂಚಿಸಲಾಗಿತ್ತು. ಸಿದ್ದರಾಮಯ್ಯ ಅವರು 2016ರ ಜೂನ್ ನಲ್ಲಿ ಈ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 
ಸಿದ್ದರಾಮಯ್ಯ ನಾನು ನ್ಯಾಯಯುತವಾಗಿ ಇದ್ದೇನೆ ಎಂದೆಲ್ಲಾ ಹೇಳುತ್ತಾರೆ ಆದರೆ ಅವರು ಮಾಡಿರುವ ಹಗರಣ ಅವರು ಎಷ್ಟು ನ್ಯಾಯಯುತವಾಗಿದ್ದಾರೆ ಅಂತಾ ತೋರಿಸುತ್ತಿದೆ ಎಂದು ಹೇಳಿರುವ ಪುಟ್ಟಸ್ವಾಮಿ ಅವರು ಈ ಹಗರಣ ಸಂಬಂಧ ನಾಳೆ ಎಸಿಬಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. 
ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಮಗನ ಒಡೆತನದ ಸಂಸ್ಥೆಗೆ ಭೂಮಿ ನೀಡಿದ್ದಾರೆ ಎಂಬ ಬಿಜೆ ಪುಟ್ಟಸ್ವಾಮಿ ಅವರ ಆರೋಪವನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ ಅವರು ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. 
SCROLL FOR NEXT