ರಾಜಕೀಯ

ರೋಷನ್ ಬೇಗ್ ಬಳಸಿದ ಭಾಷೆ ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ: ಜಗದೀಶ್ ಶೆಟ್ಟರ್

Lingaraj Badiger
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಬಳಸಿದ ಭಾಷೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಅವರು, ರೋಷನ್ ಬೇಗ್ ಅವರ ಬಳಸಿದ ಭಾಷೆ ಕೇವಲ ಅವರ ಸಂಸ್ಕೃತಿ ಮಾತ್ರವಲ್ಲ ಕಾಂಗ್ರೆಸ್ ನ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಒಂದು ವೇಳೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೋಷನ್ ಬೇಗ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ, ರೋಷನ್ ಬೇಗ್ ಅವರ ಅವಾಚ್ಯ ಶಬ್ದಕ್ಕೆ ರಾಹುಲ್ ಮತ್ತು ಸಿದ್ದರಾಮಯ್ಯ ಒಪ್ಪಿಗೆ ಇದೆ ಎಂದು ಜನ ಭಾವಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.
ಇದುವರೆಗೂ ಯಾವುದೇ ಕಾಂಗ್ರೆಸ್ ನಾಯಕರು ರೋಷನ್ ಬೇಗ್ ಅವರ ಹೇಳಿಕೆಯನ್ನು ಖಂಡಿಸಿಲ್ಲ. ಇದರ ಅರ್ಥ ಅವಾಚ್ಯ ಶಬ್ದ ಬಳಕೆಗೆ ಅವರ ಬೆಂಬಲವಿದೆ ಎಂದಿದ್ದಾರೆ.
ಶಿವಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ಭಾಷೆಯಲ್ಲಿಯೇ ಮಾತನಾಡಿದ್ದ ರೋಷನ್ ಬೇಗ್ ಅವರು, 500 ಮತ್ತು 1000 ರುಪಾಯಿ ನೋಟುಗಳ ಅಪನಗದೀಕರಣದಿಂದ ಪ್ರಧಾನಿ ಮೋದಿ ವಿರುದ್ಧ ಅವರಿಗೆ ವೋಟ್ ಹಾಕಿದವರೇ ತಿರುಗಿಬಿದ್ದಿದ್ದು ಸೂ....ಮಗ ನೋಟು ಬ್ಯಾನ್ ಮಾಡಿದ ಪ್ರಧಾನಿ ಎಂದು ಜನ ಆಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. 
SCROLL FOR NEXT