ಕೆ.ಮುರುಳೀಧರ ರಾವ್ 
ರಾಜಕೀಯ

ಬೆಂಗಳೂರು: ನವೆಂಬರ್ 2 ರಂದು ಬಿಜೆಪಿ ಪರಿವರ್ತನಾ ಯಾತ್ರೆಗೆ 75 ಸಾವಿರ ಬೈಕ್ ಗಳು!

ನವೆಂಬರ್ 2 ರಂದು ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯಲ್ಲಿ ಮಾರು 75 ಸಾವಿರ ಬೈಕ್ ಗಳಲ್ಲಿ ರ್ಯಾಲಿ

ಬೆಂಗಳೂರು: ನವೆಂಬರ್ 2 ರಂದು ಬಿಜೆಪಿ ಹಮ್ಮಿಕೊಂಡಿರುವ  ಪರಿವರ್ತನಾ ಯಾತ್ರೆಯಲ್ಲಿ ಸುಮಾರು 75 ಸಾವಿರ ಬೈಕ್ ಗಳಲ್ಲಿ ರ್ಯಾಲಿ ನಡೆಯಲಿದೆ.
ಕಳೆದ ತಿಂಗಳು ಮಂಗಳೂರು ಚಲೋಗೆ ಪೂರಕವಾಗಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯನ್ನು ನಿರ್ಬಂಧಿಸಿತ್ತು.  ದಕ್ಷಿಣ ಕರ್ನಾಟಕದ  27 ಸಾವಿರ ಬೂತ್ ಗಳಿಂದ ಮೂರು ಬೈಕ್ ಗಳಲ್ಲಿ ಆರು ಕಾರ್ಯಕರ್ತರು ತೆರಳಲಿದ್ದು, ಸುಮಾರು 1.60 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರ್ಯಯಾಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಬೈಕ್ ರ್ಯಾಲಿ ತುಮಕೂರು ರಸ್ತೆಯ ಬಿಐಸಿಸಿ ಮೈದಾನಕ್ಕೆ ಆಗಮಿಸಲಿದೆ ಎಂದು ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಪರುಳಿಧರ ರಾವ್ ಹೇಳಿದ್ದಾರೆ. 
ಯಾತ್ರೆ ನಡೆಯುವ ಪ್ರತಿಯೊಂದು ದಿನವೂ  ರಾಜ್ಯ ಸರ್ಕಾರದ ಒಂದೊಂದು ಹಗರಣವನ್ನು ಪಕ್ಷ ಬಯಲುಗೊಳಿಸಲಿದೆ. ತಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂಬ ವಿಶ್ವಾಸ ಇದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ. ಬೀದಿಯಲ್ಲೇ ಚರ್ಚೆ ಮಾಡಲು ಪಕ್ಷ ಸಿದ್ಧ’ ಎಂದು ಸವಾಲು ಹಾಕಿದರು.
ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೋಳ್ಳಲಿದ್ದಾರೆ.  ಒಂದು ವೇಳೆ ಕಾಂಗ್ರೆಸ್ ಸರ್ಕಾರ ರ್ಯಾಲಿಯನ್ನು ಮತ್ತೆ ನಿರ್ಬಂಧಿಸಿದರೇ  ಮೊದಲ ದಿನವೇ ನಮ್ಮ ಯಾತ್ರೆ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT