ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಲೋಗೋ 
ರಾಜಕೀಯ

ಮೇಯರ್ ಸ್ಥಾನಕ್ಕಾಗಿ ಮುಂದುವರಿದ ಹಗ್ಗ ಜಗ್ಗಾಟ: ಇಬ್ಬರ ಜಗಳದ ಲಾಭ ಪಡೆಯಲು ಬಿಜೆಪಿ ತಂತ್ರ!

ಸಿಲಿಕಾನ್ ಸಿಟಿಯ ಪ್ರಥಮ ಪ್ರಜೆ ಸ್ಥಾನಕ್ಕಾಗಿ ಮೂರು ಪ್ರಮುಖ ಪಕ್ಷಗಳು ಹವಣಿಸುತ್ತಿವೆ. ಮೇಯರ್ ಹುದ್ದೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಗಳದ ಲಾಭ ...

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಥಮ ಪ್ರಜೆ ಸ್ಥಾನಕ್ಕಾಗಿ ಮೂರು ಪ್ರಮುಖ ಪಕ್ಷಗಳು ಹವಣಿಸುತ್ತಿವೆ. ಮೇಯರ್ ಹುದ್ದೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಗಳದ ಲಾಭ ಪಡೆದುಕೊಳ್ಳಲು ಬಿಜೆಪಿ ತಂತ್ರ ನಡೆಸುತ್ತಿದೆ. 
ಮೂರನೇ ವರ್ಷ ತನಗೆ ಮೇಯರ್ ಸ್ಥಾನ ನೀಡಬೇಕೆಂದು ಜೆಡಿಎಸ್ ಬಿಗಿ ಪಟ್ಟು ಹಿಡಿದಿದೆ. ಜೆಡಿಎಸ್ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಳ್ಳಲೆಂದು ಬಿಜೆಪಿ ಬಯಸುತ್ತಿದೆ, ಜೊತೆಗೆ ಮೂರು ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ತೆಗೆದು ಹಾಕಿರುವುದು ಬಿಜೆಪಿಗೆ ವರದಾನವಾಗುವ ಸಾಧ್ಯತೆಯಿದೆ. 
ಈ ಬಾರಿಯ ಮೇಯರ್ ಹುದ್ದೆ ಪರಿಶಿಷ್ಠ ಜಾತಿಗೆ ಹಾಗೂ ಉಪ ಮೇಯರ್ ಹುದ್ದೆ  ಜನರಲ್ ಕ್ಯಾಟಗರಿಯ ಮಹಿಳೆಗೆ ಮೀಸಲಾಗಿದೆ, ಆದರೆ ತಾನೇ ಈ ಬಾರಿಯೂ ಮೇಯರ್ ಆಗಬೇಕೆಂದು ಬಯಸಿದ್ದ ಕಾಂಗ್ರೆಸ್ ಗೆ ಜೆಡಿಎಸ್  ಹಿಡಿದಿರುವ ಹಠದಿಂದ ನಿರಾಸೆಯಾಗುವ ಸಾಧ್ಯತೆಯಿದೆ, ಕಳೆದ 2 ವರ್ಷಗಳಿಂದ ಮೇಯರ್ ಹುದ್ದೆಗೆ ಬೆಂಬಲ ನೀಡಿದ್ದ ಜೆಡಿಎಸ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದೆ. 
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 101 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು.  ಕಾಂಗ್ರೆಸ್ 76, ಹಾಗೂ ಜೆಡಿಎಸ್ 14 ಸೀಟು ಪಡೆದಿತ್ತು. ಆರು ಪಕ್ಷೇತರ ಸದಸ್ಯರು ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಬೆಂಬಲ ಸೂಚಿಸಿದ್ದರು. ಬಿಜೆಪಿಗೆ ಸರಳ ಬಹುಮತವಿದ್ದರೂ ಮೇಯರ್ ಚುನಾವಣೆಯಲ್ಲಿ ಅಧಿಕಾರ ಪಡೆಯಲು ವಿಫಲವಾಯಿತು. ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರಿಗೆ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ
ಅವಕಾಶ ಬಿಜೆಪಿ ಆಸೆಗೆ ತಣ್ಣೀರೆರೆಚಿತ್ತು. ಹೀಗಾಗಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ, ಬಿಜೆಪಿಗಿಂತ ಹೆಚ್ಚಿನ ಬಲ ಹೊಂದಿತ್ತು.
ಮೇಯರ್ ಚುನಾವಣೆಯಲ್ಲಿ 266 ಮಂದಿಗೆ ಮತದಾನ ಮಾಡುವ ಅವಕಾಶವಿರುತ್ತದೆ, ಬಿಜೆಪಿ ಮುಖಂಡರ ಪ್ರಕಾರ ಅವರು 126 ಮತದಾರರನ್ನು ಹೊಂದಿದ್ದಾರೆ, 266 ಮತದಾರರ ಪೈಕಿ ಜಯಗಳಿಸಲು 134 ಬಹಮತದ ಅವಶ್ಯಕತೆಯಿದೆ, ನಮ್ಮ ಬಳಿ 126 ಮತಗಳಿದ್ದು, ಗೆಲುವಿಗೆ 8 ಮತಗಳ ಅವಶ್ಯಕತೆಯಿದೆ. ಹೀಗಾಗಿ ಉಳಿದ ಮತಗಳಿಗಾಗಿ ಜೆಡಿಎಸ್ ಇಲ್ಲವೇ ಪಕ್ಷೇತರರ ಬೆಂಬಲ ಕೋರುತ್ತೇವೆ, ಎರಡು ಸಾಧ್ಯವಾಗದಿದ್ದಲ್ಲಿ ಕಾಂಗ್ರೆಸ್ ಮತದಾರರನ್ನು ಹೇಗೆ ಸೆಳೆಯಬೇಕು ಎಂಬುದು ಗೊತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.  
ಈ ಬಾರಿ ಮೇಯರ್ ಚುನಾವಣೆಯಲ್ಲಿ ತಮ್ಮ ಜಯಗಳಿಸುವುದಾಗಿ ಬಿಜೆಪಿ ಸದಸ್ಯ ಪದ್ಮ ನಾಭ ರೆಡ್ಡಿ ಭರವಸೆ ವ್ಯಕ್ತ ಪಡಿಸಿದ್ದಾರೆ. ಜನಾದೇಶಕ್ಕೆ ನಮಗೆ ಸರಳ ಬಹುಮತದ ಅವಶ್ಯಕತೆಯಿದೆ, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕೊಂದು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ವಿಳಾಸ ನೀಡುವ ಮೂಲಕ ಕಳೆದ ಬಾರಿ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರ ಮೂರ್ತಿ ಅವರಿಗೆ 8 ಮಂದಿ ವಿರುದ್ಧ ದೂರು ನೀಡಲಾಗಿದೆ, 8 ಮಂದಿ ಪೈಕಿ  ಮೂವರ ಹೆಸರನ್ನು ತೆಗೆಸಲಾಗಿದೆ, ಬಳ್ಳಾರಿ ಸದಸ್ಯ ಅಲ್ಲಂ ವಿರಭದ್ರಪ್ಪ ಕಳೆದ ಏಪ್ರಿಲ್ ನಲ್ಲಿ ಬಳ್ಳಾರಿ ಮೇಯರ್ ಚುನಾವಣೆಯಲ್ಲೂ ಕೂಡ ಮತದಾನ ಮಾಡಿದ್ದಾರೆ.  ಕಳೆದ ವರ್ಷ ಸೆಪ್ಟಂಬರ್ ನಲ್ಲಿ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಸಹ ಮತ ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಉಳಿದ ಮೂವರು ಎಂಎಲ್ ಸಿಗಳ ಹೆಸರನ್ನು ಡಿಲೀಟ್ ಮಾಡುವಂತೆ ನಾವು ಕೇಳಿದ್ದೇವೆ,  ಒಂದು ವೇಳೆ ಅದು ಸಾಧ್ಯವಾಗದಿದ್ದರೇ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಪದ್ಮನಾಭರೆಡ್ಡಿ ತಿಳಿಸಿದ್ದಾರೆ. ಬಿಬಿಎಂಪಿ ಯಲ್ಲಿ ನಮ್ಮದು ಅತಿ ದೊಡ್ಡ ಪಕ್ಷ, ಮೇಯರ್ ಹುದ್ದೆ ನಮಗೆ ಸಿಗಬೇಕು, 
ಬಿಜೆಪಿಯ ಮೇಯರ್ ಹುದ್ದೆ ಆಕಾಂಕ್ಷಿಗಳು:  ಕಾಡುಗೋಡಿ ವಾರ್ಡ್ ನ ಮುನಿಸ್ವಾಮಿ, ಸಿಂಗಸಂದ್ರ ವಾರ್ಡ್ ನ ವಿ. ಶಾಂತಾ, ಕಮ್ಮನಹಳ್ಳಿಯ ಮುನಿ ಲಕ್ಷ್ಮಮ್ಮ, ಜ್ಞಾನ ಭಾರತಿಯ ತೇಜಸ್ವಿನಿ ಮೇಯರ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. 
ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಪಕ್ಷದ ಮನವೊಲಿಸಲು ಸಫಲವಾದರೇ ಕಾಂಗ್ರೆಸ್ ಗೆ ಮೇಯರ್ ಹಾಗೂ ಜೆಡಿಎಸ್ ಗೆ ಉಪ ಮೇಯರ್ ಸ್ಥಾನ ದೊರೆಯಲಿದೆ, ಆದರೆ ಜೆಡಿಎಸ್ ತನ್ನ ಪಟ್ಟು ಸಡಿಲಿಸದೇ ಕಾಂಗ್ರೆಸ್ ಮೇಲೆ ತನ್ನ ಒತ್ತಡ ಮುಂದುವರಿಸಿದರೇ  ಜೆಡಿಎಸ್ ಗೆ ಮೇಯರ್ ಹಾಗೂ ಕಾಂಗ್ರೆಸ್ ಉಪ ಮೇಯರ್ ಹುದ್ದೆ ಸಿಗಲಿದೆ. 
ಇದೆರಡು ಸಾಧ್ಯವಾಗದೇ ಒಂದು ವೇಳೆ ಜೆಡಿಎಸ್ ಬೆಂಬಲ ವಾಪಸ್ ತೆಗೆದು ಕೊಂಡು ಮತದಾನದಿಂದ ದೂರ ಉಳಿದರೇ ಮೇಯರ್ ಮತ್ತು ಉಪ ಮೇಯರ್ ಎರಡು ಹುದ್ದೆಗಳು ಬಿಜೆಪಿ ಪಾಲಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್