ವೀರಪ್ಪ ಮೊಯ್ಲಿ 
ರಾಜಕೀಯ

ಪ್ರಣಾಳಿಕೆ ಸಿದ್ಧಪಡಿಸುವಾಗ ಎಲ್ಲಾ ನಾಯಕರ ಸಲಹೆ ಪಡೆಯಲಾಗಿದೆ: ವೀರಪ್ಪ ಮೊಯ್ಲಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜ್ವರ ಜೋರಾಗಿಯೇ ಇದ್ದು, ಇದೇ ಮೊದಲ ಕಾಂಗ್ರೆಸ್ ಪ್ರಾದೇಶಿಕ ಅಗತ್ಯತೆಗಳ ಆಧಾರದ ಮೇಲೆ ಪ್ರಾಣಾಳಿಕೆಯನ್ನು ಸಿದ್ಧಪಡಿಸಿದೆ. ಇದಲ್ಲದೆ, ರಾಜ್ಯ ಹಾಗೂ ಬೆಂಗಳೂರು ನಗರದ ಅಗತ್ಯತೆಗಳಿಗುಣವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ...

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜ್ವರ ಜೋರಾಗಿಯೇ ಇದ್ದು, ಇದೇ ಮೊದಲ ಕಾಂಗ್ರೆಸ್ ಪ್ರಾದೇಶಿಕ ಅಗತ್ಯತೆಗಳ ಆಧಾರದ ಮೇಲೆ ಪ್ರಾಣಾಳಿಕೆಯನ್ನು ಸಿದ್ಧಪಡಿಸಿದೆ. ಇದಲ್ಲದೆ, ರಾಜ್ಯ ಹಾಗೂ ಬೆಂಗಳೂರು ನಗರದ ಅಗತ್ಯತೆಗಳಿಗುಣವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.
ಈಗಾಗಲೇ ಸಿದ್ಧಗೊಂಡಿರುವ ಪ್ರಣಾಳಿಕೆಗೆ ಫೈನಲ್ ಟಚ್ ನೀಡುವತ್ತ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿಯವರು ಕಾರ್ಯನಿರತರಾಗಿದ್ದಾರೆ. 
ಕಾಂಗ್ರೆಸ್ ಪ್ರಣಾಳಿಕೆ ಕುರಿತಂತೆ 'ನ್ಯೂ ಇಂಡಿಯನ್ ಎಕ್ಸ್'ಪ್ರೆಸ್'ನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಎಲ್ಲಾ ನಾಯಕರ ಸಲಹೆಗಳನ್ನು ಪಡೆಯಲಾಯಿತು ಎಂದು ಹೇಳಿದ್ದಾರೆ. ನಂತರ 'ನ್ಯೂ ಇಂಡಿಯನ್ ಎಕ್ಸ್'ಪ್ರೆಸ್' ಕೇಳಿದ ಕೆಲ ಪ್ರಶ್ನೆಗಳಿಗೆ ಮೊಯ್ಲಿ ಉತ್ತರ ನೀಡಿದ್ದು, ಅವರ ಪ್ರತಿಕ್ರಿಯೆ ಈ ಕೆಳಗಿನಂತಿದೆ...
ಪ್ರಣಾಳಿಕೆಯಲ್ಲಿ ಯಾವುದಕ್ಕೆ ಹೆಚ್ಚಿನ ಗಮನ ನೀಡಲಾಯಿತು? 
ಜನಪರ ಪ್ರಣಾಳಿಕೆಯನ್ನು ಸಿದ್ಧಪಡಿಸುವ ವೇಳೆ ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಯಿತು. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಕೆಲ ಪರಿವರ್ತನಾ ಕ್ರಮಗಳನ್ನು ಸೂಚಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಮೈತ್ರಿ ವಲಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಳ್ಳಿಗಳ ಸಮೃದ್ಧಿಗೆ ಕೃಷಿ ವಲಯ ಅತ್ಯಂತ ಮುಖ್ಯವಾಗಿರುತ್ತದೆ. ಇದು ನಗರ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಕೇವಲ ಘೋಷಣಾ ವಾಕ್ಯವಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯರೂಪದ ಕ್ರಮಗಳ ಬಗ್ಗೆ ಮಾತಾನಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. 
ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಈ ಯೋಜನೆಗಳನ್ನು ಮುಂದುವರೆಸಲು ಪ್ರಣಾಳಿಕೆಯಲ್ಲಿ ಪ್ರೋತ್ಸಾಹವನ್ನು ನೀಡಲಾಗಿದೆ. ಐಟಿ/ಬಿಟಿ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಿಗೂ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಐಟಿ ವಲಯದಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 
ನಿಮ್ಮ ಪ್ರಣಾಳಿಕೆಯ ವಿಶೇಷತೆಗಳೇನು?
ನಾವು ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲೆಗಳಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ರಾದೇಶಿಕ ಹಂತದಲ್ಲಿ ಸಭೆಗಳನ್ನು ನಡೆಸಲಾಯಿತು. ರಾಜ್ಯದಲ್ಲಿ ಅನೇಕ ನಾಯಕರೊಂದಿಗೂ ಮಾತುಕತೆಗಳನ್ನು ನಡೆಸಲಾಯಿತು. ವಿವಿಧ ವಲಯಗಳ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಯಿತು. ರೈತರಪರ ಸಂಘಟನೆಯ ಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾಲಯಗಳ ನಿವೃತ್ತ ಉಪ ಕುಲಪತಿಗಳೊಂದಿಗೂ ಸಭೆ ನಡೆಸಿ ಮಾಹಿತಿ ಕಲೆ ಹಾಕಲಾಯಿತು. ಎಲ್ಲಾ ವಲಯಗಳಲ್ಲೂ ಇದೇ ರೀತಿಯ ತಂತ್ರಗಳನ್ನು ಬಳಸಲಾಯಿತು. 2025ರ ದೃಷ್ಟಿಯ ದಾಖಲೆಗಳನ್ನು ಪರಿಶೀಲಿಸಲಾಯಿತು. ಅಲ್ಲದೆ. ಸರ್ಕಾರದ ಸಾಧನೆಗಳ ದಾಖಲೆಗಳನ್ನು ಪರಿಶೀಲಿಸಲಾಯಿತು. ಮುಖ್ಯಮಂತ್ರಿಗಳು ಸಚಿವರೊಂದಿಗೂ ಸಭೆ ನಡೆಸಲಾಯಿತು. ಈಗಾಗಲೇ ಪ್ರಣಾಳಿಕೆ ಸಿದ್ಧಗೊಂಡಿದ್ದು, ಇದೀಗ ಪ್ರಣಾಳಿಕೆಗೆ ಫೈನಲ್ ಟಚ್ ನೀಡಲಾಗುತ್ತದೆ. ಮುಂದಿನ ಸೋಮವಾರದೊಳಗಾಗಿ ಪ್ರಣಾಳಿಕೆ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಪ್ರಣಾಳಿಕೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಪ್ರಸ್ತಾಪವಿದೆಯೇ?
ಪ್ರಣಾಳಿಕೆ ಸಿದ್ಧಪಡಿಸುವ ವೇಳೆ ನಾವು ಈ ಬಗ್ಗೆ ಆಲೋಚನೆ ಕೂಡ ಮಾಡಿಲಿಲ್ಲ ಎಂದಿದ್ದಾರೆ. 
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ?
ನಾವು ಯಾವುದೇ ರೀತಿಯ ರಾಜಕೀಯ ಲೆಕ್ಕಾಚಾರಗಳನ್ನು ಮಾಡಿಲ್ಲ. ಸಾಕಷ್ಟು ಜನರು ಇದು ಹೊಸ ವಿಚಾರವೆಂದು ತಿಳಿಯುತ್ತಿದ್ದಾರೆ. ಆದರೆ, ಅತ್ಯಂತ ಹಳೆಯ ವಿಚಾರವಾಗಿದೆ. ಈ ರೀತಿಯ ಯಾವುದೇ ಚಳುವಳಿಗಳು ದೇಶದಲ್ಲಿ ಎಲ್ಲಿಯೂ ನಡೆಯದೇ ಇದ್ದರಿಂದ ಹೊಸದಾಗಿ ಕಾಣುತ್ತಿದೆ. ಸ್ವಲ್ಪಮಟ್ಟಿಗೆ ಇತಿಹಾಸ ಕೂಡ ಇದರಲ್ಲಿ ಅಡಗಿದೆ ಎಂದು ನಾನು ಭಾವಿಸುತ್ತೇನೆ. ಲಿಂಗಾಯತರು ತಮಗೆ ಗುರುತು ಬೇಕೆಂದು ಆಗ್ರಹಿಸಿದಾಗ, ಅದನ್ನು ಸರ್ಕಾರ ತಡೆಯಲು ಸಾಧ್ಯವಿಲ್ಲ. ಜನರ ಭಾವನೆಗಳಿಗೆ ತಗ್ಗಿಸುವ ಮೂಲಕ ಬಿಜೆಪಿ ತನ್ನ ತನವನ್ನು ಕಳೆದುಕೊಂಡಿದೆ. ಈ ವಿಚಾರ ಸಂಬಂಧ ಪಕ್ಷ ಯಾವುದೇ ರೀತಿಯ ನಿಲುವನ್ನೂ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. 
ಇದರಿಂದ ಸರ್ಕಾರ ಅಧಿಕಾರಾವಧಿಯ ಮೇಲೆ ಪರಿಣಾಮ ಬೀರಲಿದೆಯೇ? 
ಈ ಸಂಬಂಧ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಈಗಾಗಲೇ ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿದೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಲಾಗುತ್ತದೆ. ಪ್ರತ್ಯೇಕ ಧರ್ಮ ಸ್ಥಾನ ಈಗಾಗಲೇ ಸಮುದಾಯದಲ್ಲಿ ಬೇರೂರಿದೆ. ಇದನ್ನು ಯಾರಾದರೂ ಪರಿಗಣಿಸಿದರೆ. ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲದೇ ಹೋದರೆ, ಅವರನ್ನು ಕೀಳು ಮಟ್ಟದಲ್ಲಿ ನೋಡಲಾಗುತ್ತಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆ ಅತ್ಯಂತ ತೀವ್ರತೆಯನ್ನು ಹೊಂದಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಇದೇ ಮೊದಲ ಬಾರಿಗೆ ನಾವು ಪ್ರತೀಯೊಬ್ಬ ಮತದಾರನತ್ತ ತಲುಪಲು ಕೇವಲ ಒಂದು ಬಾರಿ ಅಲ್ಲ, ಐದು ಬಾರಿ ಯತ್ನ ನಡೆಸುತ್ತಿದ್ದು, ಚುನಾವಣೆಯನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. 
ಕಾಂಗ್ರೆಸ್ ಎದುರು ಇರುವ ಸವಾಲುಗಳು ಯಾವುವು? 
ನಿರ್ಲಜ್ಜ ಪಕ್ಷ ಬಿಜೆಪಿಯೆ ದೊಡ್ಡ ಸವಾಲು. ಬಿಜೆಪಿ ಸರ್ಕಾರವನ್ನು ಖರೀದಿ ಮಾಡುತ್ತಿದೆ. ಗೋವಾ ಮತ್ತು ಮಣಿಪುರದಲ್ಲಿ ಅದನ್ನೇ ಮಾಡಿತ್ತು. ಆದರೆ, ಕರ್ನಾಟಕದಲ್ಲಿ ಆಗಲು ನಾವು ಬಿಡಲಿಲ್ಲ. ಭ್ರಷ್ಟಾಚಾರ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಮತ್ತು ತಮ್ಮ ಪಕ್ಷದ ಹಲವು ನಾಯಕರು ಜೈಲಿಗೆ ಹೋಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಗರಣ ಮುಕ್ತ ಸರ್ಕಾರವನ್ನು ನಡೆಸುತ್ತಿದ್ದಾರೆ. ಶೇ.10 ಕಮಿಷನ್ ಬಂದಿದ್ದು ಮೋದಿಯವರಿಂದ ಎಂದು ಹೇಳಿದ್ದಾರೆ. 
ಕಾಂಗ್ರೆಸ್'ನ ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಪರಿಣಾಮ ಬೀರುತ್ತದೆ ಎಂದೆನಿಸುತ್ತದೆಯೇ? 
ಇಲ್ಲ, ಜಾತ್ಯಾತೀತ ಪಕ್ಷವಾಗಿ ಜೆಡಿಎಸ್ ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. 
ಒಬ್ಬ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರನ್ನು ಹೇಗೆ ಅಳೆಯುತ್ತೀರಿ? 
ಹಿಂದೆಂದೂ ಇಲ್ಲದೆ ಅತ್ಯುತ್ತಮ ಮುಖ್ಯಮಂತ್ರಿ ಎಂದು ಅಳೆಯುತ್ತೇನೆ. ಕಳೆದ 5 ವರ್ಷಗಳಲ್ಲಿ ಎಲ್ಲಾ ಚುನಾವಣೆಗಳಲ್ಲೂ ಹಾಗೂ ಉಪ ಚುನಾವಣೆಗಳಲ್ಲೂ ಮತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಶೇ.36.59ರಿಂದ 46.89ಕ್ಕೆ ಏರಿಕೆಯಾಗಿದೆ. 1977ರ ಬಳಿಕ 5 ವರ್ಷಗಳ ಕಾಲ ಸರ್ಕಾರ ನಡೆಸಿದ್ದು ಸಿದ್ದರಾಮಯ್ಯ. ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕೆಂದು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದರು. ಇದು ಕರ್ನಾಟಕದ ಹೆಮ್ಮೆಯ ಪ್ರತೀಕ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ