ಬೆಂಗಳೂರು: 14ನೇ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಹಲವು ದಾಖಲೆಗಳು ಸೇರ್ಪಡೆಯಾಗಿದೆ, ಕಾಂಗ್ರೆಸ್ ನ ಹೆಚ್ಚಿನ ಶಾಸಕರು ಅಧಿವೇಶನಕ್ಕೆ ಹಾಜರಾಗಿದ್ದಾರೆ ಎಂಬುದು ಮಾಹಿತಿ ಹಕ್ಕಿನಡಿ ತಿಳಿದು ಬಂದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ 14ನೇ ಅಧಿವೇಶನದಲ್ಲಿ ಜೆಡಿಎಸ್ ಶಾಸಕರು ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ, ಎಲ್ಲಾ ಕಾಂಗ್ರೆಸ್ ಶಾಸಕರುಗಳಿಗಿಂತ ಎನ್ .ಎ ಹ್ಯಾರಿಸ್ ಹೆಚ್ಚು ಸಕ್ರಿಯವಾಗಿದ್ದರು ಎಂಬುದನ್ನು ಅಂಕಿ ಅಂಶ ತಿಳಿಸಿದೆ., 224 ಶಾಸಕರುಗಳಲ್ಲಿ 208 ಶಾಸಕರು ಅಧಿವೇಶನದಲ್ಲಿ ಹೆಚ್ಚು ಪ್ರಶ್ನೆ ಕೆಳಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಕಾವಲುಗಾರ ತ್ರಿಲೋಚನ ಶಾಸ್ತ್ರಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಸಚಿವಲಾಯದ ಪ್ರಕಾರ, 14ನೇ ವಿಧಾನಸಭೆ ಅಧಿವೇಶನದಲ್ಲಿ 216 ದಿನಗಳ ಕಾಲ ಸದನ ನಡೆದಿದೆ, 2013 ಮತ್ತು 2017ರ ನಡುವೆ ನಡೆದ ದೀರ್ಘಕಾಲದ ಅಧಿವೇಶನ ಇದಾಗಿದೆ, ಒಟ್ಟು 15 ಅಧಿವೇಶನಗಳಲ್ಲಿ 8ನೇ ಅಧಿವೇಶನ ಜೂನ್ 29 2015 ಹಾಗೂ ನವೆಂಬರ್ 27 2015ರ ಅಧಿವೇಶನಗಳಲ್ಲಿ ಹೆಚ್ಚಿನ ದಿನ ಸದನ ನಡೆದಿದೆ, 11 ನೇ ಅಧಿವೇಶನದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಸದನ ಜರುಗಿದೆ,
ತುಮಕೂರು ನಗರದ ಕಾಂಗ್ರೆಸ್ ಶಾಸಕ, ಡಾ. ರಫೀಖ್ ಅಹ್ಮದ್, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ,ಬಿ ಪ್ರಸನ್ನ ಕುಮಾರ್, ಸಿರಗುಪ್ಪ ಶಾಸಕ ಬಿ.ಎಂ ನಾಗರಾಜ್ ಅತಿ ಹೆಚ್ಚು ದಿನಗಳ ಕಾಲ ಸದನದಲ್ಲಿ ಪಾಲ್ಗೊಂಡು ಶೇ.95 ರಷ್ಟು ಹಾಜರಾತಿ ಪಡೆದಿದ್ದಾರೆ.
14ನೇ ವಿಧಾನಸಭೆ ಅಧಿವೇಶನದಲ್ಲಿ 37 ಸಾವಿರ 110 ಪ್ರಶ್ನೆಗಳನ್ನು ಕೇಳಲಾಗಿದೆ, ಅದರಲ್ಲಿ ಜೆಡಿಎಸ್ ಶಾಸಕ ಗೋಪಾಲಯ್ಯ 885 ಮತ್ತು ಮಲ್ಲಿಕಾರ್ಜುನ ಖೂಬಾ 795 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಅದಿವೇಶನದಲ್ಲಿ 216 ಬಿಲ್ ಗಳನ್ನು ಪ್ರಸ್ತಾಪಿಸಿದ್ದು ಅದರಲ್ಲಿ 209 ಮಸೂದೆಗಳು ಪಾಸಾಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos