ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಸ್ಪರ್ಧೆಗಿಳಿಯುವ ಕುರಿತು ಈವರೆಗೂ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಈ ವರೆಗೂ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಂಡಿಲ್ಲ. ಹೈದರಾಬಾದ್ ನಲ್ಲಿ ಏ.10 ರಂದು ಸಭೆ ನಡೆಸಲಾಗುತ್ತಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಸಭೆಯಲ್ಲಿ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಐಎಂಐಎಂ ರಾಜ್ಯ ಮುಖ್ಯಸ್ಥ ಉಸ್ಮಾನ್ ಅವರು ತಿಳಿಸಿದ್ದಾರೆ.
ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಾಗುತ್ತದೆ ಎಂಬುದರ ಕುರಿತು ನಾನು ಎಂದಿಗೂ ಹೇಳಿಕೆಯನ್ನು ನೀಡಿಲ್ಲ. ಚುನಾವಣೆ ವೇಳೆ ಏನೇನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಒಂದು ವೇಳೆ ಎಐಎಂಐಎಂ ನಮಗೆ ಬೆಂಬಲ ನೀಡಿದರೆ, ಮುಸ್ಲಿಮರ ಮತಗಳು ಇಬ್ಬಾಗಗೊಳ್ಳುತ್ತವೆ. ಕಾಂಗ್ರೆಸ್'ಗೆ ಬೆಂಬಲ ನೀಡಿದ್ದೇ ಆದರೆ, ಆ ಮತಗಳು ಅವರ ಲಾಭಕ್ಕೆ ತಕ್ಕಂತೆ ಕ್ರೋಡೀಕರಣಗೊಳ್ಳುತ್ತವೆ. ಒಂದು ವೇಳೆ ತಟಸ್ಥ ನಿಲುವು ತಾಳಿದ್ದೇ ಆದರೆ, ಮೈದಾನ ವಿಶಾಲವಾಗಿದೆ ಎಂದು ಜೆಡಿಎಸ್ ನಾಯಕ ಪಿಜಿಆರ್. ಸಿಂದಿಯಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics