ಬೆಂಗಳೂರು: ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಟೀಕಿಸಿದ್ದ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಟಬು ರಾವ್ ಅವರ ಪ್ರಸ್ತಾಪ ಮಾಡಿದ್ದ ಸಂಸದ ಪ್ರತಾಪ್ ಸಿಂಹಾ ವಿರುದ್ಧ ಟಬು ರಾವ್ ತೀವ್ರ ಅಸಮಾಧಾನಗೊಂಡಿದ್ದಾರೆ.
ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಟಬು ರಾವ್ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ದಿನೇಶ್ ಅವರು ನೀಡಿರುವ ಹೇಳಿಕೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ತಮ್ಮನ್ನು ಮಧ್ಯೆ ಎಳೆದು ತಂದಿರುವುದು ತಪ್ಪು. ದಿನೇಶ್ ಅವರ ಹೇಳಿಕೆ ಸಂಬಂಧ ಅವರು ಏನು ಬೇಕಾದರೂ ಹೇಳಲಿ. ಆದರೆ, ಮಾತಿನ ಭರದಲ್ಲಿ ನನ್ನನ್ನು ಎಳೆ ತರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರತಾಪ್ ಸಿಂಹ ಅವರ ಹೇಳಿಕೆ ತಮಗೇ ತೀವ್ರವಾಗಿ ನೋವುಂಟು ಮಾಡಿದೆ. ಆದರೆ ದಿನೇಶ್ ಅವರ ಹೇಳಿಕೆ ವಿಚಾರದಲ್ಲಿ ನನ್ನನ್ನು ಎಳೆ ತಂದಿರುವುದು ಪ್ರತಾಪ್ ಸಿಂಹ ಹೇಡಿತನವನ್ನು ತೊರುತ್ತದೆ. ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಯಲ್ಲಿ ತಮ್ಮ ಹೆಸರನ್ನು ಬೇಗಂ ತಬು ಎಂದು ಪ್ರಸ್ತಾಪ ಮಾಡಿರುವುದು ಅವರ ಕೋಮುವಾದಿತನದ ಕೀಳು ಮನೋಭಾವನೆಯನ್ನು ಪ್ರದರ್ಶಿಸುತ್ತದೆ. ತಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ್ದು ಹಾಗೂ ಬ್ರಾಹ್ಮಣ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ನಾವಿಬ್ಬರು ಸಂತೋಷವಾಗಿಯೇ ಮದುವೆಯಾಗಿದ್ದೇವೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿನ ಏಕತೆ ಎಂಬ ಮೌಲ್ಯದ ಆಧಾರದ ಮೇಲೆ ಎರಡು ದಶಕಗಳಿಂದ ಸಂತೋಷದಿಂದ ಜೀವನ ನಡೆಸಿದ್ದೇವೆ ಎಂದು ಟಬು ಹೇಳಿದ್ದಾರೆ.
ಅಲ್ಲದೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರಾಗಿರುವ ಪ್ರತಾಪ್ ಸಮಾಜದಲ್ಲಿ ಅನಾರೋಗ್ಯಕರ ಬೀಜಗಳನ್ನು ಬಿತ್ತನೆ ಮಾಡುವ ಬದಲು ಕುವೆಂಪು ಅವರ ವಿಶ್ವ ಮಾನವ ಸಂದೇಶ ಪಾಲಿಸುವಂತೆ ಪ್ರತಾಪ್ ಸಿಂಹ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಟಬು ರಾವ್ ಅವರ ಈ ಪೋಸ್ಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.
ಇನ್ನು ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಫೈಸ್ ಬುಕ್ ನಲ್ಲಿ ವಿಡಿಯೋ ಮೂಲಕ ಉತ್ತರ ನೀಡಿದ್ದ ಪ್ರತಾಪ್, ದಿನೇಶ್ ಗುಂಡೂರಾವ್ ಅವರು ರಾಜ್ಯಕ್ಕೆ ಮುಲ್ಲಾಗಳು ಅಥವಾ ಮೌಲ್ವಿಗಳು ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಹೇಳಿದ್ದರೆ, ಅವರ ಪತ್ನಿ ಬೇಗಂ ಟಬು ಅವರೇ ಅವರು ಹೇಳಿದ ಕೆಲಸವನ್ನು ಮಾಡುತ್ತಿದ್ದರು ಎಂದು ಕಿಡಿಕಾರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos