ಬೆಂಗಳೂರು: ಕಳೆದ ಬಾರಿಯಂತೆ ಈ ಬಾರಿ ಸಹ ಬಿಬಿಎಂಪಿ ಹಾಲಿ ಹಾಗು ಮಾಜಿ ಮೇಯರ್ ಗಳು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
2013ರ ಚುನಾವಣೆಯಲ್ಲಿ ಅಂದಿನ ಮೇಯರ್ ವೆಂಕಟೇಶ್ ಮೂರ್ತಿ ಮತ್ತು ಮಾಜಿ ಮೇಯರ್ ಗಳಾದ ಚಂದ್ರಶೇಖರ್ ಅವರುಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಉಳಿದಂತೆ ಮಾಜಿ ಮೇಯರ್ ಗಳಾದ ಶಾಂತಕುಮಾರಿ, ಬಿ.ಎಸ್. ಸತ್ಯನಾರಾಯಣ, ಎಸ್.ಕೆ. ನಟರಾಜ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದರೂ ಟಿಕೆಟ್ ಪಡೆಯಲು ವಿಫಲರಾದರು.
ಈ ಸಾಲಿನ ಚುನಾವಣೆಯಲ್ಲಿ ಬಿಬಿಎಂಪಿ ಹಾಲಿ ಮೇಯರ್ ಸಂಪತ್ ರಾಜ್ ಸಿ.ವಿ.ರಾಮನ್ ನಗರದಿಂದ, ಮಾಜಿ ಮೇಯರ್ ಜಿ ಪದ್ಮಾವತಿ ರಾಜಾಜಿನಗರದಿಂದ ಸ್ಪರ್ಧಿಸಲಿದ್ದಾರೆ.
ಸಂಪತ್ ರಾಜ್ ದೇವರಜೀವನಹಳ್ಳಿಯ ಕಾರ್ಪೋರೇಟರ್ ಆಗಿದ್ದು ಈ ವಾರ್ಡ್ ಪುಲಕೇಶಿನಗರ ವಿಧಾನಸಭೆ ಕ್ಷೇತ್ರಕ್ಕೆ ಸೇರುತ್ತದೆ. ಆದರೆ ಅಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದ ಶಾಸಕ ಅಖಂಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಸಿ.ವಿ. ರಾಮನ್ ನಗರ ಕೂಡ ನನ್ನ ತವರು ಕ್ಷೇತ್ರದಂತೆ ನನಗೆ ಭಾಸವಾಗುತ್ತದೆ. ಇದು ಭಾರತಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾಗಿನಿಂದ ನಾನಿಲ್ಲಿ ದುಡಿದಿದ್ದೇನೆ. ಹೀಗಾಗಿ ನನಗೇನೂ ಇದು ಹೊರ ಪ್ರದೇಶ ಎನಿಸದು ಎಂದು ಸಂಪತ್ ರಾಜ್ ಹೇಳಿದರು.
"ಸಿವಿ ರಾಮನ್ ನಗರದಲ್ಲಿನ ಏಳು ಇಂದಿರಾ ಕ್ಯಾಂತೀನ್ ಗಳನ್ನು ನಾನು ಆಯಾ ವಾರ್ಡ್ ಕೌನ್ಸಿಲರ್ ಸಮ್ಮುಖದಲ್ಲಿ ಉದ್ಘಾಟಿಸಿದ್ದೇನೆ.ಅಲ್ಲದೆ ನಗರದಲ್ಲಿ ನಾನು ಕೈಗೊಂಡ ಕಾರ್ಯಗಳನ್ನು ಜನರು ಗುರುತಿಸಿದ್ದಾರೆ, ಮೆಚ್ಚಿಕೊಂಡಿದ್ದಾರೆ" ಮೇಯರ್ ಹೇಳಿದರು.
ವಾಸ್ತವದಲ್ಲಿ ಕಾಂಗ್ರೆಸ್ ಅವರನ್ನು ಮೇಯರ್ ಸ್ಥಾನಕ್ಕೆ ತಂದಾಗ ಪಕ್ಷವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದಿತ್ತು. ಆದರೆ ನನ್ನ ಉತ್ತಮ ಕೆಲಸ ಕಾರ್ಯ್ಗಳನ್ನು ಗುರುತಿಸಿ ಈಗ ಬೋನಸ್ ಆಗಿ ಟಿಕೆಟ್ ನೀಡಿದ್ದಾರೆ ಎಂದು ಸಂಪತ್ ರಾಜ್ ಹೇಳಿದರು.
17 ತಿಂಗಳ ಕಾಲ ಮೇಯರ್ ಆಗಿದ್ದ ವೆಂಕತೇಶ ಮೂರ್ತಿ 2013ರ ಚುನಾವಣೆಯಲ್ಲಿ ಶಾಂತಿನಗರದಿಂದ ಸ್ಪರ್ಧಿಸಿದ್ದರು."ಮೇಯರ್ ಗಳಿಗೆ ಸಾಮಾನ್ಯವಾಗಿ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು. ಅವರು ಸಾಕಷ್ಟು ಜನಪ್ರಿಯತೆ ಗಳಿಸಿರುತ್ತಾರೆ. ಮಾದ್ಯಮಗಳು ಅವರ ಕೆಲಸ ಕಾರ್ಯಗಳ ಪ್ರಚಾರ ಮಾಡುತ್ತಿರುತ್ತದೆ. ಅಲ್ಲಎ ಮೇಯರ್ ಆಗಿ ಶಾಸಕಕರಾಗುವುದರಿಂದ ಅವರ ಅನುಭವವೂ ಅವರ ನೆರವಿಗೆ ಬರುತ್ತದೆ ಎಂದು ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ಪ್ರಾದ್ಯಾಪಕ, ರಾಜಕೀಯ ವಿಶ್ಲೇಷಕ ನರೇಂದ್ರ ಪಾಣಿ ಹೇಳೀದಂತೆ "ಮೇಯರ್ ಗಳನ್ನು ಚುನಾವಣೆಗೆ ಇಳಿಸುವುದು ಹಿಂದಿನಿಂದ ಬಂದಿದೆ.ಇದು ಒಂದು ಸ್ವಾಭಾವಿಕ ಪ್ರಕ್ರಿಯೆ. ಒಬ್ಬ ಕಾರ್ಪೋರೇಟರ್ ಬಿಬಿಎಂಪಿ ಚುನಾವಣೆಯಲ್ಲಿ ಸಾಕಶ್ಃಟು ಖರ್ಚು ಮಾಡುವರಲ್ಲದೆ ಕನಿಷ್ಟ 3- 4 ಇತರ ಕೌನ್ಸಿಲರ್ ಗಳು ಅವರಿಗೆ ಬೆಂಬಲ ನೀಡುತ್ತಾರೆ. ಇದರಿಂದಾಗಿ ಮೇಯರ್ ಗಳಿಗೆ ಬೇಗನೇ ಅವಕಾಶ ಲಭಿಸುತ್ತದೆ."
"ಸಿ.ವಿ. ರಾಮನ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೇಯರ್ ಸಂಪತ್ ರಾಜ್ ಅವರಿಗಿದು ಹೊಸ ಕ್ಷೇತ್ರ. ಅಲ್ಲದೆ ಸಂಪತ್ ರಾಜ್ ಅಲ್ಲಿ ಗೆಲುವು ಸಾಧಿಸಲು ಸ್ಥಳೀಯ ಕೌನ್ಸಿಲರ್ ಗಳ ಬೆಂಬಲ ಅಗತ್ಯವಾಗಲಿದೆ" ಅವರು ಹೇಳಿದರು.