ಮೈಸೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿಯವರು ಇಲ್ಲಸಲ್ಲದ ಆರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. 'ನಾವು ಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸುತ್ತೇವೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಇದನ್ನೆ ಮುಂದಿಟ್ಟು ಪ್ರಚಾರ ಮಾಡಿದ್ದೆವು. ಜನ ನಮ್ಮನ್ನು ಗೆಲ್ಲಿಸಿದರು. ಬಿಜೆಪಿಯವರ ಸುಳ್ಳು ಆರೋಪಗಳಿಗೆ ಮಣೆ ಹಾಕಲಿಲ್ಲ' ಎಂದರು.
'ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಸರ್ಕಾರ ಅಪಘಾತ ಮಾಡಿ ನನ್ನನ್ನು ಕೊಲೆ ಮಾಡಲು ಯತ್ನಿಸಿದೆ ಎಂದಿದ್ದಾರೆ. ಹೇಳಿಕೆ ಹಾಸ್ಯಾಸ್ಪದ ಮತ್ತು ಮೂರ್ಖತನದಿಂದ ಕೂಡಿದೆ. ರಾಜಕೀಯ ಲಾಭಕ್ಕಾಗಿ ಆಧಾರವಿಲ್ಲದೆ ಜನರನ್ನು ಮೂರ್ಖರನ್ನಾಗಿ ಮಾಡಲು ಹೇಳಿಕೆ ನೀಡಿದ್ದಾರೆ. ಪದೇ ಪದೇ ಸುಳ್ಳು ಹೇಳಿ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ. ಇವರೇ ಮೂರ್ಖರಾಗುತ್ತಾರೆ' ಎಂದರು.
ಅಮಿತ್ ಶಾ ನಾನು ಜೈನ್ ಅಲ್ಲ ಎಂದು ಹೇಳಲಿ. ಅವರಿಗಿಂತ ನಾನು ಅವರಿಗಿಂತ ಒಳ್ಳೆಯ ಹಿಂದು. ನನಗೆ ಮಾನವೀಯ ಮೌಲ್ಯಗಳ ಬಗ್ಗೆ ನಂಬಿಕೆ ಇದೆ. ಮನುಷ್ಯತ್ವ ಇದೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇರೋ ನಾನು ಇವರಿಗಿಂತ ಉತ್ತಮ. ಹೆಣದ ಮೇಲೆ ರಾಜಕೀಯ ಮಾಡುವುದು ನಮಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ನಮ್ಮ ಸರ್ಕಾರವನ್ನು 10 % ಕಮಿಷನ್ ಸರ್ಕಾರ ಅಂದಿದ್ದಾರಲ್ಲ. ಸರ್ಕಾರದಲ್ಲಿ ಯಾವ ಭ್ರಷ್ಟಾಚಾರದ ಆರೋಪಗಳಿವೆ ಅವರು ತೋರಿಸಲಿ. ಮೋದಿಯವರದ್ದು ಆಧಾರ ರಹಿತ ಸುಳ್ಳು ಆರೋಪ ಎಂದು ಸವಾಲು ಹಾಕಿದರು. ನಮ್ಮ ಕಾಲದಲ್ಲಿ ಗೋಲಿಬಾರ್ ಆಗಿಲ್ಲ.ರೈತ ನಾಯಕ, ರೈತ ಬಂಧು ಯಡಿಯೂರಪ್ಪಕಾಲದಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಿದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos