ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ 
ರಾಜಕೀಯ

ನಾಮಪತ್ರ ಸಲ್ಲಿಸಲು 'ಶುಭ ಮುಹೂರ್ತ'ಕ್ಕೆ ರಾಜಕೀಯ ನೇತಾರರ ಮೊರೆ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ...

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅವರನ್ನು ಕಣಕ್ಕಿಳಿಸಲಾಗಿದ್ದು ನಿನ್ನೆ ತಮ್ಮ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಹೋಗಿದ್ದರು. ಉಮೇದುವಾರಿಕೆ ಸಲ್ಲಿಕೆಗೆ ಅರ್ಜಿ ಭರ್ತಿ ಮಾಡಲು ಅವರು ಚುನಾವಣಾಧಿಕಾರಿ ಕಚೇರಿಯಲ್ಲಿ ಉತ್ತಮ ಸಮಯಕ್ಕಾಗಿ ಗಡಿಯಾರವನ್ನು ನೋಡುತ್ತಿದ್ದರು.

ಸಂಪ್ರದಾಯದ ಮೇಲಿನ ಅವರ ನಂಬಿಕೆ ಅವರೊಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಲು ಎಲ್ಲಾ ಪಕ್ಷಗಳ ರಾಜಕಾರಣಿಗಳು ಒಳ್ಳೆಯ ಸಮಯಕ್ಕಾಗಿ ನೋಡುವುದು ಸಾಮಾನ್ಯವಾಗಿದೆ.

ನಿನ್ನೆ ವೈಶಾಖ ಮಾಸ ಪಂಚಮಿ ದಿನ ಉತ್ತಮವಾಗಿದೆ ಎಂದು ಹಲವು ಮುಖಂಡರು ನಾಮಪತ್ರ ಸಲ್ಲಿಸಿದರು. ಅವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಗೃಹ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನ ಬಿಟಿಎಂ ಲೇ ಔಟ್ ನಿಂದ, ಸೊರಬದಿಂದ ಕುಮಾರ ಬಂಗಾರಪ್ಪ, ರಾಜಾಜಿನಗರ ಕ್ಷೇತ್ರದಿಂದ ಮಾಜಿ ಮೇಯರ್ ಪದ್ಮಾವತಿ ಪ್ರಮುಖರು.

ದೇವರ ಮೇಲೆ ಭಾರೀ ನಂಬಿಕೆ ಹೊಂದಿಲ್ಲದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ನಿನ್ನೆ ನಾಮಪತ್ರಿ ಸಲ್ಲಿಕೆಗೆ ಮುನ್ನ ಮೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕೆ ಚುನಾವಣಾಧಿಕಾರಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ಅವರ ಊರ ದೇವರು ಸಿದ್ದರಾಮನಹುಂಡಿ, ಚಾಮುಂಡೇಶ್ವರಿ ದೇವಸ್ಥಾನ ಮತ್ತು ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.

ಇದು ನಾವು ನಂಬಿಕೊಂಡು ಬಂದಿರುವ ಸಂಪ್ರದಾಯ. ನಾನು ಯಾರ ಸಲಹೆ ಕೇಳದಿದ್ದರೂ ಸಹ ನನ್ನ ಕುಟುಂಬದವರು ಮಾಡುತ್ತಾರೆ. ಅವರು ಹೇಳಿದ ಪ್ರಕಾರ ನಾನು ನಾಮಪತ್ರ ಸಲ್ಲಿಕೆಗೆ ಶುಕ್ರವಾರವನ್ನು ಆರಿಸಿಕೊಂಡೆ ಎಂದು ರಾಮಲಿಂಗಾ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಶುಕ್ರವಾರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಅತಿ ಉತ್ತಮವಾದ ದಿನ. ಶುಕ್ಲ ಪಕ್ಷದ ಐದನೇ ದಿನವಾದ ಇಂದು ಜ್ಯೋತಿಷಿಗಳು ಹೇಳಿದಂತೆ ನಾಮಪತ್ರ ಸಲ್ಲಿಸಿದವರಿಗೆ ಗೆಲುವು ಖಚಿತ. ಶುಕ್ರವಾರ ದೇವಿಸ್ತುತಿ ಮಾಡಿ ಉಮೇದುವಾರಿಕೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ. ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೆ ಸಹ ಶುಕ್ರವಾರ ಒಳ್ಳೆಯ ದಿನವೇ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್.

ಈ ಬಾರಿ ಚುನಾವಣೆ ದಿನಾಂಕ ಅಮವಾಸ್ಯೆಯಂದು ಆಗಿರುವುದರಿಂದ ಅದು ಒಳ್ಳೆಯ ದಿನವಲ್ಲ ಎಂಬುದು ಹಲವರ ಅನಿಸಿಕೆ. ಜ್ಯೋತಿಷಿಗಳ ಸಲಹೆಯಂತೆ ಕೆಲವರು ಪೂಜೆ ನೆರವೇರಿಸುತ್ತಾರೆ. ಇನ್ನು ಕೆಲವರು ಹೋಮ ಕೂಡ ಮಾಡುತ್ತಾರೆ. ಇನ್ನು ಕೆಲವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಸಹ ದಿನಂಪ್ರತಿ ಮಾಡಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT