ಸಾಂದರ್ಭಿಕ ಚಿತ್ರ 
ರಾಜಕೀಯ

ಟಿಕೆಟ್ ಹಂಚಿಕೆ: ರಾಜಕೀಯ ಪಕ್ಷಗಳಿಂದ ಬಂಟ ಸಮುದಾಯಕ್ಕೆ ಮಣೆ, ಕರಾವಳಿ ಜಿಲ್ಲೆ ಬಿಲ್ಲವರಲ್ಲಿ ಅಸಮಾಧಾನ ಸ್ಪೋಟ

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಂಟರ ಸಮುದಾಯ ರಾಜಕೀಯವಾಗಿ ಪ್ರಬಲ ಸಮುದಾಯವಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ........

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಂಟರ ಸಮುದಾಯ ರಾಜಕೀಯವಾಗಿ ಪ್ರಬಲ ಸಮುದಾಯವಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಹ ಈ ಸಮುದಾಯಕ್ಕೆ ದೊಡ್ಡ ಪಾಲು ದಕ್ಕಿದೆ.
ಕಾಂಗ್ರೆಸ್ ನ ರಮಾನಾಥ ರೈ ಅವರ ಹಿಡಿತದಲ್ಲಿರುವ ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಮುಖ ವಿರೋಧ ಪಕ್ಷ ಬಿಜೆಪಿ ಈ ಬಾರಿ ಬಂಟ ಸಮುದಾಯದ ಮತಗಳನ್ನು ತನ್ನದಾಗಿಸಿಕೊಳ್ಳ್ಲು ತಂತ್ರ ಹೆಣೆದಿದೆ. ಇದಕ್ಕಾಗಿ ಕೇಸರಿ ಪಡೆ ದಕ್ಷಿಣ ಕನ್ನಡದಲ್ಲಿ ಶೇ.50ರಷ್ಟು ಸಾಮಾನ್ಯ ವರ್ಗದ ಟಿಕೆಟ್ ಗಳನ್ನು ಬಂಟ ಸಮುದಾಯದ ನಾಯಕರಿಗೆ ನೀಡಿದೆ. ಭಾಜಪ ಒಟ್ಟು 12  ಬಂಟರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.  
ಇದೇ ವೇಳೆ ಕಾಂಗ್ರೆಸ್ ಪಕ್ಷ ಸಹ ಬಂತ ಸಮುದಾಯದ ಮೂವರು ಅಭ್ಯರ್ಥಿಗಳಿಗೆ ಟಿಕೆಟ್ ನಿಡಿದ್ದು ಇದು ಕೂಡ ಬೇರೆಲ್ಲ ಸಮುದಾಯಕ್ಕೆ ಹೋಲಿಸಿದರೆ ಬಂಟ ಸಮುದಾಯಕ್ಕೆ ಪಕ್ಷದಲ್ಲಿ ಹೆಚ್ಚು ಪ್ರಾಮುಖ್ಯತೆ ದೊರಲಿರುವುದನ್ನು ತೋರಿಸಿದೆ. 
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಜನಸಂಖ್ಯೆ ಆಧಾರದ ಮೇಲೆ ಬಿಲ್ಲವರು ಪ್ರಥಮ ಸ್ಥಾನದಲ್ಲಿದ್ದಾರೆ. ಇವರು ಅದಾಗಲೇ ಒಪ್ಪಂದವೊಂದಕ್ಕೆ ಬಂದಿರುವಂತೆ ಕಾಣಿಸುತ್ತಿದ್ದು  ಕಾಂಗ್ರೆಸ್ ಪಕ್ಷದಿಂದ ಮೂವರು ಬಿಲ್ಲವ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಕೇವಲ ಇಬ್ಬರು ನಾಯಕರಿಗಷ್ಟೇಸ್ಪರ್ಧಿಸಲು ಅವಕಾಶ ನಿಡಿದೆ. 
ಎರಡೂ ಪಕ್ಷಗಳು ತಲಾ ಒಬ್ಬೊಬ್ಬ ಮೊಗವೀರ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಇನ್ನುಳಿದಂತೆ ಕಾಂಗ್ರೆಸ್ ಪಕ್ಷವು ಭಂಡಾರಿ ಸಮುದಾಯ, ಜೈನ ಹಾಗೂ ಕ್ರೈಸ್ತ ಮತಸ್ಥರಿಗೆ ತಲಾ ಒಂದೊಂದು ಟಿಕೆಟ್ ನೀಡಿದ್ದರೆ ಮುಸ್ಲಿಮರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದೆ.
ಬಿಜೆಪಿ ಇಬ್ಬರು ಬ್ರಾಹ್ಮಣ ಹಾಗೂ ಓರ್ವ ಗೌಡ (ಒಕ್ಕಲಿಗ) ಸಮುದಾಯದ ವ್ಯಕ್ತಿಗಳಿಗೆ ಟಿಕೆಟ್ ನಿಡಿದೆ.
ಬಿಲ್ಲವರಲ್ಲಿ ಅಸಮಾಧಾನ ಸ್ಪೋಟ
ಟಿಕೆಟ್ ಹಂಚಿಕೆ ಸಂಬಂಧ ಬಿಲ್ಲವ ಸಮುದಾಯ ತೀವ್ರ ಅತೃಪ್ತಿಯನ್ನುಹೊರಹಾಕಿದೆ. ಬಿಲ್ಲವ ಅಸೋಸಿಯೇಷನ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಗೊಂಡಿದ್ದು ಬಿಜೆಪಿಗೆ ಸೂಕ್ತವಾದ ಪಾಠವನ್ನು ಕಲಿಸಲು ಫೇಸ್ ಬುಕ್ ಅಭಿಯಾನವನ್ನೇ ಆರಂಭಿಸಿದೆ. ಬಿಲ್ಲವ ಸಮುದಾಯ ಪ್ರಬಲವಾಗಿರುವ ಮಂಗಲೂರು, ಮಂಗಳೂರು (ಉತ್ತರ), ಬೆಳ್ತಂಗಡಿ ಹಾಗೂ ಬಂಟ್ವಾಳದಂತಹಾ ಕ್ಷೇತ್ರದಲ್ಲಿ ಬಿಜೆಪಿ ಬಂಟ ಸಮುದಾಯಕ್ಕೆ ಮಣೆ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ. ವೇದಕುಮಾರ್ ಹೇಳಿದ್ದಾರೆ.
 "ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ, ಎರಡೂ ಪಕ್ಷಗಳು ಜಿಲ್ಲೆಯೊಂದಕ್ಕೆ ಎರಡು ಸ್ಥಾನಗಳನ್ನಾದರೂ ಬಿಲ್ಲವರಿಗೆ ನೀಡಬೇಕಾಗಿತ್ತು. ಪಕ್ಷವನ್ನು ಬೆಳೆಸಲು ರಾಜಕೀಯ ಪಕ್ಷಗಳಿಗೆ ನಮ್ಮ ಅಗತ್ಯವಿಎ, ಆದರೆ ಚುನಾವಣೆಗಳಲ್ಲಿ ಟಿಕೆಟ್ ನೀಡಲು ಸಿದ್ದರಿಲ್ಲ"ಅವರು ಹೇಳಿದರು.
ಬಿಲ್ಲವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ಅನ್ಯಾಯವಾಗಿದೆ ಎಂದಿರುವ ಬಿಲ್ಲವ ಸಮುದಾಯದ ನಾಯಕ ಸದಾನಂದ ಪೂಜಾರಿ, ಇನ್ನೆರಡು ದಿನಗಳಲ್ಲಿ ಸಮುದಾಯದ ಪ್ರ್ಮುಖರು ಸಭೆ ನಡೆಸಿ ಬಿಲ್ಲವರು ಅಧಿಕವಾಗಿರುವ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗುತ್ತದೆ ಎಂದರು.
ಯಾರಿಗೆಷ್ಟು ಸ್ಥಾನ?
ಕಾಂಗ್ರೆಸ್
ಬಂಟ್ಸ್ 3
ಬಿಲ್ಲವರು 3
ಮುಸ್ಲಿಮರು 2
ಮೊಗವೀರ 1
ಕ್ರೈಸ್ತರು 1
ಜೈನ್ 1
ಭಂಡಾರಿ 1
ಬಿಜೆಪಿ
ಬಂಟ್ಸ್ 6
ಬಿಲ್ಲವರು 2
ಮೊಗವೀರ 1
ಬ್ರಾಹ್ಮಣ 2
ಗೌಡ 1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!