ಅಭಿವೃದ್ಧಿ ಕಾರ್ಯ ನಡೆಸಿಲ್ಲ, ಮತ ಹಾಕಲ್ಲ, ಸುಳ್ಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಬೆದರಿಕೆ
ಮಂಗಳೂರು: ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ರಬ್ಬರ್ ತೋಟಗಳು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದತ್ತ ಸ್ಥಳಾಂತರವಾಗಿದೆ. ಸಮೃದ್ದ ನೀರಾವರಿ ಭೂಮಿ ಹೊಂದಿ, ಭತ್ತಕ್ಕೆ ಹೆಸರಾಗಿರುವ ಕರಾವಳಿಯ ಈ ಭಾಗದಲ್ಲಿ ವಿಧಾನಸಭೆ ಚುನಾವಣೆ ಕಾವೇರತೊಡಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಸುಳ್ಯ ಏಕಮಾತ್ರ ಮೀಸಲು ಕ್ಷೇತ್ರವಾಗಿದೆ. ಸುಳ್ಯದಿಂದ ಬಿಜೆಪಿಯ ಎಸ್. ಅಂಗಾರ ಐದು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಕಳಪೆ ದರ್ಜೆಯ ಮೂಲಸೌಕರ್ಯ, ರಸ್ತೆ ಸಂಪರ್ಕದ ಕೊರತೆ ಇದೇ ಮೊದಲಾದ ಕಾರಣದಿಂದ ಕೇಂದ್ರ ಸರ್ಕಾರದ ಬಲ ಹಾಗೂ ಸಿದ್ದಾಂತಗಳ ಟ್ರಂಪ್ ಮಾರ್ಕ್ ಇದ್ದರೂ ಸಹ ಇಲ್ಲಿ ಹಾಲಿ ಶಾಸಕರು ಬಲವಾದ ಪರೀಕ್ಷೆ ಎದುರಿಸಬೇಕಾಗುವುದು.
ಕ್ಷೇತ್ರದಲ್ಲಿ ಹಲವಾರು ಬಗೆಯ ಸಮಸ್ಯೆಗಳಿದೆ. ಸುಳ್ಯದ ಅಜ್ಜವಾರು, ಅಲೇತಿ, ಮಂಡೆಕೋಲುವಿನಂತಹಾ ಭಾಗಗಳಲ್ಲಿ ಕಾಡಾನೆಗಳ ಉಪಟಳವಿದೆ. ಅಲ್ಲದೆ ಕಮ್ಮಾಲೆ, ಹೊಸಗದ್ದೆಯಂತಹಾ ಗ್ರಾಮದ ಜನ ಮೂಲಸೌಕರ್ಯ ಅಭಿವೃಅದ್ದಿ ಹೊಂದಿಲ್ಲ, ಸರ್ಕಾರ ನೀಡಿದ ಅನುದಾನ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಸ್ಸಿ / ಎಸ್ಟಿ ಸಮುದಾಯದ ಅಭಿವೃದ್ದಿಗಾಗಿ ಒದಗಿಸಿದ್ದ ನಿಧಿ ಸರಿಯಾಗಿ ಬಳಕೆಯಾಗಿಲ್ಲ ಎನ್ನುವ ಹೊಸಗದ್ದೆ ಗ್ರಾಮಸ್ಥರು ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಗ್ರಾಮಗಳಲ್ಲಿ ರಸ್ತೆಗಳು ಸೇರಿ ಮೂಲಸೌಕರ್ಯಗಳ ಕೊರತೆ ಇದೆ. ಈ ಸ್ಥಿತಿ ಕೇವಲ ಒಂದೇ ಹಳ್ಳಿಯಲ್ಲಲ್ಲ ಹೊಸಗದ್ದೆ ಸುತ್ತ ಮುತ್ತಲಿನ ಅನೇಕ ಹಳ್ಳಿಗಳ ಕಥೆ ಇದಾಗಿದೆ."ಮಳೆಗಾಲದಲ್ಲಿ ಪ್ರವಾಹ ಬಂದು ನಮ್ಮ ಮನೆಯಂಗಳದಲ್ಲೆಲ್ಲಾ ನೀರು ತುಂಬುವುದು, ಹಲವು ವರ್ಷಗಳಿಂದಲೂ ನಾವು ರಸ್ತೆಗಾಗಿ ಬೇಡಿಕೆ ಇಟ್ಟರೂ ಯಾರೂ ಅದನ್ನು ಕಿವಿ ಮೇಲೆ ಹಾಕಿಕೊಂಡಿಲ್ಲ. ಈ ಬಾರಿ ನಾವು ಚುನಾವಣೆಯಿಂಅ ದೂರ ಇರಲು ತೀಉರ್ಮಾನಿಸಿದ್ದೇವೆ" ಗ್ರಾಮಸ್ಥರಾದ ನಂದನ ಶಾಂತಾರಾಮ್ ಹೇಳಿದ್ದಾರೆ.
ಎಸ್ಸಿ / ಎಸ್ಟಿಗಳ ಹೆಸರಿನಲ್ಲಿ ಹಣವನ್ನುದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸರಿಯಾದ ಮೂಲಸೌಕರ್ಯ ದೊರಕುತ್ತಿಲ್ಲ ಎಂದು ನಂದನಾ ಆರೊಪಿಸಿದ್ದಾರೆ. ಸುಳ್ಯ ಕಾನೂನು ಕಾಲೇಜು ಪ್ರಾದ್ಯಾಪಕ ಶಾಂತಾರಾಂ ಇಂದಿಗೂ ಶಾಸಕರನ್ನು ಪ್ರಶ್ನಿಸುತ್ತಾರೆ.
ಗ್ರಾಮಸ್ಥರ ಸಮಸ್ಯೆಗಳ ಕುರಿತಂತೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದ ಶಾಂತಾರಾಮ್ ಕಾಂಗ್ರೆಸ್ ಶಾಸಕರಿದ್ದಾಗ ಹಳ್ಳಿಗಳನ್ನು ಜೋಡಿಸುವ ಸೇತುವೆಯನ್ನು 1994ರಲ್ಲಿ ನಿರ್ಮಿಸಲಾಗಿತ್ತು. ಆ ಬಳಿಕ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ ಅಭಿವೃಅದ್ದಿ ಕೆಲಸಗಳು ಮಾತ್ರ ನಡೆಯುತ್ತಿಲ್ಲ.
"ಈ ಕ್ಷೇತ್ರವನ್ನು ಮೀಸಲು ಕ್ಷೇತ್ರವಾಗಿಸುವುದರಿಂದ ಯಾವ ಸಹಾಯವೂ ಇಲ್ಲ. ಪಕ್ಷಗಳು ಕೆಲಸ ಮಾಡಬಲ್ಲ ಯುವಕರಿಗೆ ಮನ್ನಣೆ ನಿಡಬೇಕು.ಅಭಿವೃದ್ಧಿ ಇಲ್ಲವಾದ ಕಾರಣ ನಾವು ಮತ ಚಲಾಯಿಸುವುದಿಲ್ಲ. ಅಧಿಕಾರಿಗಳು ಆಗಲಾದರೂ ಇತ್ತ ಗಮನಿಸುತ್ತಾರೆಯೇ ನೋಡಬೇಕು ಎಂದು ಹೋಸಗದ್ದೆ ನಿವಾಸಿ ವಸಂತ ರಾಮ್ ಹೇಳಿದರು.
ಒಕ್ಕಲಿಗರು ಹೆಚ್ಚಿನ ಸಂಖ್ಯ್ಯಲ್ಲಿರುವ ಈ ಕ್ಷೇತ್ರದಲ್ಲಿ 2011ರ ಜನಗಣತಿಯಂತೆ ುಳ್ಯದಲ್ಲಿ .18,215ರಷ್ಟು ಪರಿಶಿಷ್ಠ ಜಾತಿ ಜನರಿದ್ದಾರೆ. ಇದೇ ವೇಳೆ ಪರಿಶಿಷ್ಠ ಪಂಗಡದ ಜನ 10,722ರಷ್ಟಿದ್ದಾರೆ. ಇವರಲ್ಲಿ ಎಲ್ಲರೂ ಅಂಗಾರ ವಿರೋದಿಗಳಲ್ಲ. ಹಲವರು ಅಂಗಾರ ಅವರನ್ನು ಕಾಣದಿದ್ದರೂ ಅವರೇ ಇನ್ನೊಮ್ಮೆ ಶಾಸಕರಾಗಬೇಕೆಂದು ಬಗೆದಿದ್ದಾರೆ.
"ಕೆಲ ರಸ್ತೆ ನಿರ್ಮಾಣ ಕಾಮಗಾರಿಗಳು ವಾಜಪೇಯಿ ಅವರ ಸರ್ಕಾರವಿದ್ದಾಗ ನಡೆದಿತ್ತು. ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಅನೇಕ ರಸ್ತೆಗಳು ವಿಸ್ತರಣೆಗೊಂಡುದು ಇದೆ.ಪ್ರಸ್ತುತ ಶಾಸಕರು ಸಹ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ" ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಕಾರ್ಯಕರ್ತ ನವೀನ್ ಕುಮಾರ್ ಮೆನಾಲಾ ಹೇಳಿದರು.
ದಕ್ಷಿಣ ಕನ್ನಡದ ಇತರೆ ಬಾಗದಲ್ಲಿ ಕೋಮು ಗಲಭೆಗಳುಂಟಾದ ನಿದರ್ಶ್ನಗಳಿದ್ದರೂ ಸಹ 1989ರ ಬಳಿಕ ಸುಳ್ಯದಲ್ಲಿ ಯಾವ ಕೋಮು ಘರ್ಷಣೆಗಳು ಸಂಭವಿಸಿಲ್ಲ. ಅಂಗಾರ ತಮ್ಮ ಕ್ಷೇತ್ರವದಲ್ಲಿ ಶಾಂತ ಪರಿಸ್ಥಿತಿ ಕಾಪಾಡಿಕೊಂಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics