ಸಂಗ್ರಹ ಚಿತ್ರ 
ರಾಜಕೀಯ

ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಶ್; ಮಂಡ್ಯದಲ್ಲಿ ಚಿಗುರಿದ ಬಿಜೆಪಿ ಗೆಲುವಿನ ಆಸೆ

ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿರಾಕರಿಸುವ ಮೂಲಕ ಅಂಬರೀಷ್ ಮಂಡ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗೆ ಕಾರಣರಾಗಿದ್ದು, ಇದೇ ಮೊದಲ ಬಾರಿಗೆ ಎಂಬಂತೆ ಬಿಜೆಪಿಯಲ್ಲಿ ಗೆಲುವಿನ ಆಸೆ ಚಿಗುರೊಡೆದಿದೆ.

ಮಂಡ್ಯ: ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿರಾಕರಿಸುವ ಮೂಲಕ ಅಂಬರೀಷ್ ಮಂಡ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗೆ ಕಾರಣರಾಗಿದ್ದು, ಇದೇ ಮೊದಲ ಬಾರಿಗೆ ಎಂಬಂತೆ ಬಿಜೆಪಿಯಲ್ಲಿ ಗೆಲುವಿನ ಆಸೆ ಚಿಗುರೊಡೆದಿದೆ.
ಈ ಹಿಂದೆಲ್ಲಾ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ನೇರ ಸ್ಪರ್ಧೆ ಎದುರಾಗುತ್ತಿತ್ತು, ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಕಾರಣರಾಗಿದ್ದ ಚೆಲುವರಾಯ ಸ್ವಾಮಿ ಮತ್ತು ಇತರೆ ನಾಯಕರು ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಜೆಡಿಎಸ್ ನಲ್ಲಿ ಪ್ರಬಲ ನಾಯಕರ ಕೊರತೆ ಎದುರಾಗಿದೆ. ಇನ್ನುಮಂಡ್ಯದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಅಂಬರೀಶ್ ಇದೀಗ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಮಾತ್ರವಲ್ಲ, ಪಕ್ಷದ ಪ್ರಚಾರದಲ್ಲೂ ಭಾಗವಹಿಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಚುನಾವಣಾ ಕಣದಿಂದ ಅಂಬಿ ಹಿಂದೆ ಸರಿದಿರುವ ಹಿನ್ನಲೆಯಲ್ಲಿ ಅಂಬಿಯನ್ನೇ ನೆಚ್ಚಿಕೊಂಡಿದ್ದ ಮಂಡ್ಯ, ನಾಗಮಂಗಲ, ಮದ್ದೂರು ಮತ್ತು ಶ್ರೀರಂಗ ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿಗಳು ಇದೀಗ ಕಂಗಾಲಾಗಿದ್ದಾರೆ. ಇದೀಗ ಇದೇ ವಿಚಾರ ಜೆಡಿಎಸ್ ಮತ್ತು ಬಿಜೆಪಿಗೆ ವರದಾನವಾಗಿದ್ದು, ಅಂಬಿ ಇಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ಮಂಕಾದಂತೆ ಕಾಣುತ್ತಿದೆ.  ಇತ್ತ ಇದನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಗೆಲುವಿನ ಕನಸು ಕಾಣುತ್ತಿದೆ. ಬಿಜೆಪಿ ಪರವಾಗಿ ಶುದ್ಧಹಸ್ತರು ಎಂದೇ ಖ್ಯಾತಿ ಗಳಿಸಿರುವ ಶಿವಣ್ಣ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಇದೀಗ ಅವರ ಪರ ಭರ್ಜರಿಯಾಗಿ ಬಿಜೆಪಿ ಪ್ರಚಾರ ನಡೆಸುತ್ತಿದೆ. ಅಲ್ಲದೆ ಶಿವಣ್ಣ ಪರ ಪ್ರಚಾರಕ್ಕಾಗಿ ಬಿಜೆಪಿ ಮುಖಂಡರು ಹಲವು ತಂತ್ರಗಾರಿಕೆಯಲ್ಲಿ ತೊಡಗಿದೆ.
ಇಷ್ಟು ಮಾತ್ರವಲ್ಲದೇ ಪ್ರಸ್ತುತ ಕಾಂಗ್ರೆಸ್ ಪಕ್ಷದ ಟಿಕೆಟ್ ನಿರಾಕರಿಸಿರುವ ಅಂಬರೀಶ್ ಅವರನ್ನು ತಮ್ಮ ಪಕ್ಷದತ್ತ ಸೆಳೆಯಲು ಜೆಡಿಎಸ್ ಮತ್ತು ಬಿಜೆಪಿ ಹವಣಿಸುತ್ತಿದ್ದು, ಬಿಜೆಪಿ ಪರವಾಗಿ ಅಂಬಿ ಪ್ರಚಾರ ನಡೆಸುವಂತೆ ಅವರ ಮನವೊಲಿಕೆಗೆ ಬಿಜೆಪಿ ಮುಖಂಡರು ಎಸ್ ಎಂ ಕೃಷ್ಣ ಅವರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. 
ಸಿಂಪಲ್ ಶಿವಣ್ಣ ಬಿಜೆಪಿ ಅಭ್ಯರ್ಥಿ
ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ಶಿವಣ್ಣ ಕ್ಷೇತ್ರದಲ್ಲಿ ಶುದ್ಧ ಹಸ್ತರು ಎಂಬ ಖ್ಯಾತಿ ಪಡೆದಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಚಂದಗಾಲ ಶಿವಣ್ಣ ಅವರನ್ನು ಬಿಜೆಪಿ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಶಿವಣ್ಣ ಮಾಜಿ ಶಾಸಕ ಎನ್ ತಮ್ಮಣ್ಣ ಅವರ ಸಹೋದರನಾಗಿದ್ದು, ಹಾಲಿ ಚುನಾವಣೆಯಲ್ಲಿ ತಮ್ಮಣ್ಣ ಟಿಕೆಟ್ ನಿರಾಕರಿಸಿದ್ದರಿಂದ ಅವರ ಸಹೋದರನಿಗೆ ಬಿಜೆಪಿ ಟಿಕೆಟ್ ನೀಡಿದೆ. 
ಎಸ್ ಎಂ ಕೃಷ್ಣಾ ಮೊರೆ ಹೋದ ಬಿಜೆಪಿ
ಇದೀಗ ಮಂಡ್ಯ ಭಾಗದಲ್ಲಿ ತನ್ನ ಅಸ್ತಿತ್ವ ಸಾಧಿಸಲು ಬಿಜೆಪಿಗೆ ಸುಲಭ ಅವಕಾಶವಿದ್ದು, ಇದೇ ಕಾರಣಕ್ಕೆ ಬಿಜೆಪಿ ಈ ಭಾಗದ ಪ್ರಬಲ ರಾಜಕಾರಣಿ ಎಸ್ ಎಂ ಕೃಷ್ಣಾ ಮೊರೆ ಹೋಗಿದೆ. ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಬಿಜೆಪಿ ಸೇರಿದ ಬಳಿಕ ಈ ವರೆಗೂ ಬಿಜೆಪಿ ಪರವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಚುನಾವಣೆಯಲ್ಲಿ ಕೃಷ್ಣಾ ಅವರನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಎಸ್ ಎಂ ಕೃಷ್ಣ ಮದ್ದೂರು ಕ್ಷೇತ್ರ ಪ್ರಬಲ ರಾಜಕಾರಣಿ, ಇಂದಿಗೂ ಮಂಡ್ಯ, ಮದ್ದೂರು ಭಾಗದಲ್ಲಿ ಅವರೇ ಪ್ರಬಲ ನಾಯಕರು. ಇದೇ ಕಾರಣಕ್ಕೆ ಬಿಜೆಪಿಯ ಕೆಲ ಮುಖಂಡರು ಕೃಷ್ಣಾ ಅವರನ್ನು ಭೇಟಿ ಮಾಡಿದ್ದು, ಪಕ್ಷಗದ ಪರ ಪ್ರಚಾರ ನಡೆಸುವಂತೆ ದುಂಬಾಲು ಬಿದ್ದಿದ್ದಾರೆ. ಅಷ್ಟು ಮಾತ್ರವಲ್ಲ ಪ್ರಸ್ತುತ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷ ಮುನಿಸು ತೋರಿಸಿರುವ ಅಂಬರೀಶ್ ಅವರನ್ನೂ ಮನವೊಲಿಸಿ ಬಿಜೆಪಿ ಪರ ಪ್ರಚಾರ ಮಾಡಲು ಮನವೊಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ತವರು ಕೂಡ ಮಂಡ್ಯದ ಬೂಕನಕೆರೆಯಾಗಿದ್ದು, ಇಲ್ಲಿ ವೀರಶೈವ ಸಮುದಾಯದ ಮತಗಳು ಹೆಚ್ಚಾಗಿವೆ. ಇದೂ ಕೂಡ ಬಿಜೆಪಿಗೆ ಸಕಾರಾತ್ಮಕ ಅಂಶವಾಗಿ ಪರಿಣಮಿಸುವ ಸಾಧ್ಯತೆ ಇದೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಭಾಗದಲ್ಲಿ ಬಿಜೆಪಿ ಸಾಧನೆ
ಮಂಡ್ಯದಲ್ಲಿ 2,930 ಮತಗಳು, ಶ್ರೀರಂಗ ಪಟ್ಟದಣದಲ್ಲಿ 3,102, ಮದ್ದೂರಿನಲ್ಲಿ 1,745 ಮತ ಮತ್ತು ನಾಗಮಂಗಲದಲ್ಲಿ 1,085 ಮತಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT