ತುಮಕೂರು: 1989ರ ನಂತರ ಆಂಧ್ರ ಪ್ರದೇಶದ ಈ ಯಾದವ ನಾಯಕ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಿಕೊಂಡು ಬಂದಿದ್ದಾರೆ.
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ರಘುವೀರ ರೆಡ್ಡಿ ಗಡಿ ಭಾಗದಲ್ಲಿರುವ ತುಮಕೂರು ಜಿಲ್ಲೆಯ ಸಿರಾ, ಪಾವಗಡ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಾ ಬಂದಿದ್ದಾರೆ.
ಮೊನ್ನೆ ಗುರುವಾರ ಇವರು ಅನಂತಪುರ ಜಿಲ್ಲೆಯ ಮಡಕಶಿರಾ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದರು. ಅದರಲ್ಲಿ ನಮ್ಮ ರಾಜ್ಯದ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ಮತ್ತು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ನಿತ್ಯದ ಪ್ರಚಾರ ಕಾರ್ಯವನ್ನು ಬಗಿದೊತ್ತಿ ಭಾಗವಹಿಸಿದ್ದರು. ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಎಂ.ವೆಂಕಟರಮಣಪ್ಪ ತಮ್ಮ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟೇಶ್ ಅವರನ್ನು ಸಭೆಗೆ ಕಳುಹಿಸಿದ್ದರು.
ಇಲ್ಲಿ ರಘುವೀರ ರೆಡ್ಡಿ ಪ್ರಭಾವ ಎಷ್ಟಾಗಿದೆ ಎಂದರೆ ಪಕ್ಷದ ಕಾರ್ಯಕರ್ತರಿಗೆ ಆಂಧ್ರ ಪ್ರದೇಶದ ಗಡಿಯಲ್ಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಚಾರ ನಡೆಸಲು ಸಲಹೆ-ಸೂಚನೆಗಳನ್ನು ನೀಡುತ್ತಾರಷ್ಟೆ. ಪಕ್ಷದ ಕಾರ್ಯಕರ್ತರು ರೆಡ್ಡಿಯವರ ಸಂದೇಶಗಳನ್ನು ಕರ್ನಾಟಕದ ಗಡಿ ಭಾಗಗಳಲ್ಲಿ ಪಸರಿಸುತ್ತಾರೆ. ವಿಶೇಷವಾಗಿ ಗೊಲ್ಲ ಸಮುದಾಯದ ಮನೆಗಳಿಗೆ ಎಂದು ಮಲ್ಲನಾಯಕನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಈರಣ್ಣ ಹೇಳುತ್ತಾರೆ.
ಚಿರಂಜೀವಿ ಪ್ರಚಾರವಿಲ್ಲ: ತೆಲುಗು ಮೆಗಾಸ್ಟಾರ್ ಚಿರಂಜೀವಿ ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿ ಕೂಡ ಪ್ರಚಾರ ನಡೆಸುತ್ತಾರೆಯೇ ಎಂದು ಕೇಳಿದ್ದಕ್ಕೆ ಅವರು ವಿದೇಶದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ನಡೆಸುವುದಿಲ್ಲ ಎಂದು ಹೇಳಿದ್ದಾರೆ.