ರಾಜಕೀಯ

ಆನೇಕಲ್, ಹೊಸಕೋಟೆ: ಕೈಗಾರಿಕಾ ಪ್ರದೇಶದಲ್ಲಿ ನೀಗಿಲ್ಲ ನೀರಿನ ಸಮಸ್ಯೆ, ಕೈ-ಕಮಲದ ನಡುವೆ ನೇರ ಪೈಪೋಟಿ

Sumana Upadhyaya

ಬೆಂಗಳೂರು: ಆನೆಕಲ್ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪೈಪೋಟಿ ಎದುರಾಗಲಿದೆ. ಎರಡೂ ಕ್ಷೇತ್ರಗಳ ಈಗಿರುವ ಕಾಂಗ್ರೆಸ್ ಶಾಸಕರು ಮರು ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಆನೆಕಲ್ ನಲ್ಲಿ ಜಾತಿ ರಾಜಕೀಯ ಬಹುಮುಖ್ಯ ಪಾತ್ರ ವಹಿಸಲಿದೆ. ಹೊಸಕೋಟೆಯಲ್ಲಿರುವ ಒಂದಷ್ಟು ಜನ ಮುಸಲ್ಮಾನ ಮತದಾರರು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಎರಡೂ ಸ್ಥಳಗಳಲ್ಲಿ ಕುದುರೆ ರೇಸ್ ನಂತೆ ಸ್ಪರ್ಧೆಯ ರಂಗೇರಲಿದ್ದು ಜೆಡಿಎಸ್ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂದು ಮತದಾರರು ಹೇಳುತ್ತಾರೆ.

ಆನೆಕಲ್ ಮತ್ತು ತಾಲ್ಲೂಕಿನ ಇತರ ಪಟ್ಟಣಗಳಾದ ಅತ್ತಿಬೆಲೆ, ಸರ್ಜಾಪುರ ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳಾಗಿ ಅಭಿವೃದ್ಧಿ ಹೊಂದಿದ್ದು ಹಲವು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಐಟಿ ಕಂಪೆನಿಗಳಿಗೆ ತವರಾಗಿದೆ.  ಆದರೂ ಕ್ಷೇತ್ರದ ಹಲವು ಗ್ರಾಮೀಣ ಭಾಗಗಳಲ್ಲಿ ಕೃಷಿ ಇಲ್ಲಿನ ಮೂಲ ಕಸುಬಾಗಿದ್ದರೂ ಕೂಡ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಿದೆ.

ಈಗಿನ ಕಾಂಗ್ರೆಸ್ ಶಾಸಕ ಶಿವಣ್ಣ ಬಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದು ಅವರು ರೆಡ್ಡಿ ಸಮುದಾಯದ ಮೇಲೆ ಪ್ರಭಾವ ಬೀರಿದ್ದಾರೆ. ಬಿಜೆಪಿಯ ನಾರಾಯಣಸ್ವಾಮಿ ಎ 19 ವರ್ಷಗಳ ಕಾಲ ಶಾಸಕರಾಗಿದ್ದರು. ಕೆಲವರು ಶಿವಣ್ಣ ಅವರಿಗೆ ಬೆಂಬಲ ಸೂಚಿಸಿದರೆ ಇನ್ನು ಕೆಲವರು ನಾರಾಯಣಸ್ವಾಮಿಯವರನ್ನು ಬೆಂಬಲಿಸುತ್ತಾರೆ.

ಈ ಕ್ಷೇತ್ರ ರಾಜಕೀಯದ ಬಿಸಿಬಿಸಿ ಚರ್ಚೆಗಳಿಗೆ ವೇದಿಕೆಯಾಗಿದೆ. ಅತ್ತಿಬೆಲೆಯ ಶ್ರೀನಿವಾಸ್ ಎ, ರಾಜಣ್ಣ ಮತ್ತು ರಘು ಅವರ ಚರ್ಚೆ ಸ್ಥಳೀಯ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ. ಸ್ಥಳೀಯವಾಗಿ ರೆಡ್ಡಿ ಜನಾಂಗ ಪ್ರಮುಖ ಪ್ರಭಾವಶಾಲಿಯಾಗಿದ್ದು ಸಾಂಪ್ರದಾಯಿಕವಾಗಿ ಇವರು ಬಿಜೆಪಿ ಬೆಂಬಲಿಗರಾದರೂ ಕೂಡ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ಪ್ರಭಾವದಿಂದಾಗಿ ಕಾಂಗ್ರೆಸ್ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಶ್ರೀನಿವಾಸ್ ಹೇಳುತ್ತಾರೆ.

ಇಲ್ಲಿ ಪರಿಶಿಷ್ಟ ಜಾತಿ ಕೂಡ ನಿಗದಿತ ಸಂಖ್ಯೆಯಲ್ಲಿದೆ. ಶೇಕಡಾ 60ರಿಂದ 75ರಷ್ಟು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ರಘು. ಪಂಚಾಯತ್ ಚುನಾವಣೆಗಿಂತ ವಿಧಾನಸಭೆ ಚುನಾವಣೆ ಭಿನ್ನವಾಗಿರುತ್ತದೆ. ಇಲ್ಲಿ ಅಭ್ಯರ್ಥಿಗೆ ಬದಲು ಜನರು ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುತ್ತಾರೆ ಶ್ರೀನಿವಾಸ್. ಇಲ್ಲಿ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದರು.


SCROLL FOR NEXT