ಸಾಂದರ್ಭಿಕ ಚಿತ್ರ 
ರಾಜಕೀಯ

ಸಿದ್ದರಾಮಯ್ಯ ಸರ್ಕಾರದ ಈಡೇರದ ಭರವಸೆ; ಜಾತಿ ಗುರುತು ಪತ್ರಕ್ಕೆ ಕಾಯುತ್ತಿರುವ ಬಾಂಗ್ಲಾ ಹಿಂದೂಗಳು

ಇಲ್ಲಿನ ಶಿಬಿರಗಳಲ್ಲಿ ನೆಲೆಸಿರುವ 22 ಸಾವಿರ ಬಾಂಗ್ಲಾದೇಶದ ಆಶ್ರಿತರಲ್ಲಿ 12,000 ಮಂದಿ ಮತದಾನದ ...

ರಾಯಚೂರು: ಇಲ್ಲಿನ ಶಿಬಿರಗಳಲ್ಲಿ ನೆಲೆಸಿರುವ 22 ಸಾವಿರ ಬಾಂಗ್ಲಾದೇಶದ ಆಶ್ರಿತರಲ್ಲಿ 12,000 ಮಂದಿ ಮತದಾನದ ಹಕ್ಕು ಹೊಂದಿದ್ದರೂ ಕೂಡ ರಾಜ್ಯ ಸರ್ಕಾರ ಅವರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸದಿರುವುದರಿಂದ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಕಾಂಗ್ರೆಸ್ ನಲ್ಲಿ ಇವರು ನಿರ್ಧರಿತ ಅಂಶವಾಗಿದ್ದಾರೆ.

ರಾಯಚೂರಿನ ಸಿಂಧನೂರು ತಾಲ್ಲೂಕಿನ ಬಾಂಗ್ಲಾದೇಶ ಶಿಬಿರದಲ್ಲಿರುವ ಎರಡನೇ ತಲೆಮಾರಿನ ನಿವಾಸಿ ಪ್ರಸೆನ್ ರಪ್ತಾನನಂತವರು ಶೇಕಡಾ 10 ಮಂದಿಯಿದ್ದಾರೆ. ಅವರು ಶಿಕ್ಷಣವಂತರಾಗಿದ್ದರೂ ಕೂಡ ಇಲ್ಲಿನ ಜಾತಿ ರಾಜಕಾರಣ ಕರ್ನಾಟಕ ರಾಜ್ಯದ ವಸಾಹತುಶಾರರ ಆಕಾಂಕ್ಷೆಗಳನ್ನು ಕುಗ್ಗಿಸಿದೆ.

1971ರಲ್ಲಿ ಪೂರ್ವ ಪಾಕಿಸ್ತಾನ ಹೊಸ ರಾಜ್ಯದ ಉದಯಕ್ಕೆ ಪ್ರಯತ್ನಿಸುತ್ತಿದ್ದಾಗ ಬಾಂಗ್ಲಾದೇಶದಲ್ಲಿದ್ದ ಹಲವು ಹಿಂದೂಗಳು ದೌರ್ಜನ್ಯಗಳನ್ನು ಎದುರಿಸುತ್ತಿದ್ದರು. ಆ ಸಂದರ್ಭದಲ್ಲಿ ದೇಶ ಬಿಟ್ಟು ಭಾರತಕ್ಕೆ ಪ್ರವೇಶಿಸಿದರು. ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ಬಾಂಗ್ಲಾದ ಹಿಂದೂಗಳು ಭಾರತಕ್ಕೆ ಬಂದು ವಿವಿಧ ಭಾಗಗಳಲ್ಲಿ ಆಶ್ರಯ ಪಡೆದರು.

ಕೇಂದ್ರ ಸರ್ಕಾರ ಬಾಂಗ್ಲಾದೇಶದ ಹಿಂದೂಗಳಿಗೆ ಇಲ್ಲಿ ಉಳಿದುಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಆರಂಭಿಸಿತು. ಅದರಂತೆ ಬಾಂಗ್ಲಾದ ಹಿಂದೂಗಳು ಅಸ್ಸಾಂ, ಮಿಜೋರಂ, ಮಣಿಪುರ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ನೆಲೆಸಿದ್ದಾರೆ.

ಅಲ್ಲಿ ವಸತಿ ಸಮಸ್ಯೆ ಹೆಚ್ಚಿದಾಗ ನಿರಾಶ್ರಿತರು ಈಶಾನ್ಯ ಭಾರತಗಳಿಗೆ ವಲಸೆ ಹೋದರು. ಕರ್ನಾಟಕದ ರಾಯಚೂರಿಗೆ ಸಹ ಬಂದು ನೆಲೆಸಿದರು. ಆರಂಭದ ದಿನಗಳಲ್ಲಿ ಸರ್ಕಾರ ಅವರಿಗೆ ಆರ್ಥಿಕವಾಗಿ ಸದೃಢರಾಗಲು ಜಮೀನುಗಳನ್ನು ನೀಡಿತ್ತು. 1979ರಲ್ಲಿ ಭಾರತದ ನಾಗರಿಕತ್ವ ನೀಡಿ ಮತದಾನದ ಹಕ್ಕನ್ನು ಕೂಡ ಭಾರತ ಸರ್ಕಾರ ಕಲ್ಪಿಸಿತು.

ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳಿಗೆ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಶಿಬಿರಗಳಿದ್ದು ಆರ್ ಎಚ್ 2, ಆರ್ ಎಚ್ 3, ಆರ್ ಎಚ್ 4 ಮತ್ತು ಆರ್ ಎಚ್ 5 ಎಂಬುದಾಗಿದೆ. ಇಲ್ಲಿ ಒಟ್ಟು 22,000 ಜನರಿದ್ದು ಈ ವಿಧಾನಸಭೆ ಚುನಾವಣೆಯಲ್ಲಿ 12,000 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಈ ಬಾಂಗ್ಲಾ ಹಿಂದೂಗಳಿಗೆ ನೆಲೆಗೆ ಭೂಮಿ ನೀಡಿದರೂ ಕೂಡ ಭೂಮಿಯ ಹಕ್ಕುಪತ್ರವನ್ನು ನೀಡಿಲ್ಲ. ಭೂಮಿಯನ್ನು ಉಳಬಹುದೇ ಹೊರತು ಅದರ ಹಕ್ಕುಗಳನ್ನು ಹೊಂದಿಲ್ಲ. ಕಂದಾಯ ಇಲಾಖೆ ದಾಖಲೆಗಳಲ್ಲಿ ನಮ್ಮ ಜಮೀನಿನ ಒಡೆತನ ಸರ್ಕಾರದ್ದು ಎಂದಿದೆ ಎನ್ನುತ್ತಾರೆ ಶಿವ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT