ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡೂರಾವ್ ಮತ್ತು ಡಿ.ಕೆ ಶಿವಕುಮಾರ್
ಬೆಂಗಳೂರು: ಇತ್ತೀಚಿನ ವಿಧಾನ ಸಭೆ ಚುನಾವಣಾ ಫಲಿತಾಂಶದಿಂದ ಕೆಲವು ಕಠಿಣ ಪಾಠ ಕಲಿತಿರುವ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿಸಲು ತಂತ್ರ ರೂಪಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದ ಕಾರಣ ಕಾಂಗ್ರೆಸ್ ಜೆಡಿಎಸ್ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಎದುರಾಯಿತು,
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಬಂಡವಾಳವನ್ನಾಗಿಸಿಕೊಂಡು ಪ್ರಚಾರ ನಡೆಸಲು ಸಿದ್ದತೆ ನಡೆಸಿದೆ. ಹೀಗಾಗಿ ತಣ ಮಟ್ಟದಿಂದ ಪಕ್ಷ ಬಲವರ್ದನೆಗೆ ಮುಂದಾಗಿದೆ,. ಬಿಜೆಪಿಯ ಮುಖ್ಯಸ್ಥ ಅಮಿತ್ ಶಾ ತಂತ್ರವಾದ ಪನ್ನಾ ಪ್ರಮುಖ್ ರಣತಂತ್ರವನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಲು ನಿರ್ಧರಿಸಿದೆ,. ಪ್ರತಿ 33 ಮತದಾರರಿಗೆ ಒಬ್ಬ ಕಾರ್ಯಕರ್ತ ಎಂಬ ಪನ್ನಾ ಪ್ರಮುಖ್ ಯೋಜನೆ ಬಿಜೆಪಿಗೆ ವರದಾನವಾಗಿದ್ದು ಈಗ ಕಾಂಗ್ರೆಸ್ ಅದೇ ಯೋಜನೆಗೆ ಮೊರೆ ಹೋಗಲಿದೆ,
ಜನರಿಗೆ ಉತ್ತಮ ಆಡಳಿತ ನೀಡಿದ ಹೊರತಾಗಿಯೂ ಬಿಜೆಪಿ ಪ್ರಚಾರಕ್ಕೆ ನಾವು ಕೌಂಟರ್ ಕೊಡಲು ಸಾಧ್ಯವಾಗಲಿಲ್ಲ, ಆದರೆ ಈ ಮುಂದೆ ಅವರಿಗೆ ಪರಿಣಾಮಕಾರಿಯಾದ ಪ್ರತ್ಯುತ್ತರ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು
ಈ ಹೇಳಿಕೆ ಕಾಂಗ್ರೆಸ್ ನೊಳಗೆ ಅನುರಣನಗೊಳ್ಳುತ್ತಿದೆ, ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸಿದ ಅಪ ಪ್ರಚಾರವೇ ಸೋಲಿಗೆ ಕಾರಣ ಎಂದು ಕೈ ನಾಯಕರಿಗೆ ಮನದಟ್ಟಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶದ ಧ್ರುವೀಕರಣ, ಸಿದ್ದರಾಮಯ್ಯ ಹಿಂದೂ ವಿರೋಧಿ, ಹಾಗೂ ಸದಾಶಿವ ಆಯೋಗದ ಅನುಷ್ಠಾನಗೊಳಿಸದಿರುವುದು ಕಾಂಗ್ರೆಸ್ ಭವಿಷ್ಯಕ್ಕೆ ಕುತ್ತು ತಂದಿತು.
ಹೀಗಾಗಿ ಬಿಜೆಪಿ ಪರಿಣಾಮಕಾರಿಯಾದ ಕೌಂಟರ್ ನೀಡಲು ಸಿದ್ಧತೆಯಲ್ಲಿ ತೊಡಗಿದೆ. ಇದಕ್ಕಾಗಿ ಶಕ್ತಿ ಪ್ರಾಜೆಕ್ಟ್ ಆರಂಭಿಸಿದ್ದು, ರಾಜ್ಯದ ಎಲ್ಲಾ ಭೂತ್ ಗಳಲ್ಲಿಯೂ ತಳಮಟ್ಟದಿಂದ ಪಕ್ಷವನ್ನು ಸಮರ್ಥಗೊಳಿಸುವ ಕೆಲಸ ಆರಂಭಿಸಿದೆ, ಬಿಜೆಪಿಯ ನಕರಾತ್ಮಕ ಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಬಯಸಿದೆ,. ಬಿಜೆಪಿಯ ಶಕ್ತಿ ಕೇಂದ್ರದಿಂದ ಅಂಶವೊಂದನ್ನು ತೆಗೆದುಕೊಂಡು ಲೋಕಸಭೆ ಚುನಾವಣೆಯಲ್ಲಿ ನಿರ್ದಿಷ್ಟ ಮತದಾರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.
ಶೇ.94 ರಷ್ಟು ಅಲ್ಪಸಂಖ್ಯಾತ ಮತಗಳು ಹಾಗೂ ಶೇ. 84 ರಷ್ಟು ಕುರುಬ ಮತಗಳನ್ನು ಪಡೆಯಲು ಪಕ್ಷ ಸನ್ನದ್ಧವಾಗಿದೆ, ಪಕ್ಷದ ಆಂತರಿಕ ಲೆಕ್ಕಾಚಾವಾಗಿದೆ, ಎಸ್ ಸಿ ಎಸ್ ಟಿ ಮತ್ತು ಅಹಿಂದ ವರ್ಗಗಳ ಮತಗಳು ತಮ್ಮ ಪರವಾಗಿ ಬರಲಿವೆ ಎಂದು ಹೇಳಲಾಗಿದೆ.. ಸದ್ಯ ಡ್ಯಾಮೇಡ್ ಕಂಟ್ರೋಲ್ ಮೂಡ್ ನಲ್ಲಿದ್ದು, ಕೇಂದ್ ಸರ್ಕಾರದ ಆಡಳಿತ ವಿರೋದಿ ಅಲೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ,. ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆ ಅಜೆಂಡಾ ಭಿನ್ನವಾಗಿರುತ್ತದೆ.
ಧ್ರುವೀಕರಣ ಹಾಗೂ ಹಿಂದುತ್ವದ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ, ಏಕೆಂದರೇ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆ ಅತಿ ಹೆಚ್ಚಿನ ಹಾನಿಯಾಗಿದೆ. ಸರ್ಕಾರದ ವಿರುದ್ಧ ಬಿಜೆಪಿಯ ಸುಳ್ಳು ಅಭಿಯಾನವನ್ನು ನಂಬಿರುವ ಜನರಿಗೆ ಸತ್ಯವನ್ನು ಅರ್ಥೈಸುವುದು ಕಾಂಗ್ರೆಸ್ ನ ಪ್ರಮುಖ ಗುರಿಯಾಗಿದೆ ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics