ಬೆಂಗಳೂರು: ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ದುರ್ಬಲ ಸಿ.ಎಂ, ಎಚ್.ಡಿ. ರೇವಣ್ಣ ಸೂಪರ್ ಸಿ.ಎಂ. ಹಾಗೂ ಎಚ್.ಡಿ. ದೇವೆಗೌಡ ಸರ್ವೋಚ್ಚ ಸಿ.ಎಂ, ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಗೌಡರ ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಮತ್ತೆ ಟೀಕೆ ಮಾಡಿರುವ ಬಿಜೆಪಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಟ್ವೀಟ್ ಮಾಡಿದೆ.
ಇಷ್ಟು ಮಂದಿ ಮುಖ್ಯಮಂತ್ರಿಗಳಿದ್ದರೂ ಸರ್ಕಾರ ಯಾವಾಗ ಕೆಲಸ ಆರಂಭಿಸಲಿದೆ ಎಂದು ಕಾಯುವಂತಾಗಿದೆ. ಯಾರು ನಿಜವಾದ ಮುಖ್ಯಮಂತ್ರಿ ಎಂಬುದನ್ನು ಮೊದಲು ದೇವೆಗೌಡರ ಕುಟುಂಬ ನಿರ್ಧಾರ
ಮಾಡಲಿ ಎಂದು ಬಿಜೆಪಿ ಲೇವಡಿ ಮಾಡಿದೆ.