ರಾಜಕೀಯ

ಬಿಎಸ್​ವೈ ಸಂಧಾನ ಯಶಸ್ವಿ: ಪಕ್ಷದ ಹುದ್ದೆಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಬಿ.ಜೆ.ಪುಟ್ಟಸ್ವಾಮಿ

Raghavendra Adiga
ಬೆಂಗಳೂರು: ವಿಧಾನ ಪರುಇಷತ್ ಮಾಜಿ ಸದಸ್ಯ, ಬಿಜೆಪಿ ನಾಯಕರಾದ ಬಿ.ಜೆ.ಪುಟ್ಟಸ್ವಾಮಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.
ರಾಜ್ಯ ವಿರೋಧ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಧಾನದ ಬಳಿಕ ಪುಟ್ತಸ್ವಾಮಿ ತಮ್ಮ ರಾಜೀನಾಮೆ ಹಿಂದೆ ಪಡೆದಿದ್ದಾರೆ. ಹಾಗೇ ಅವರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಪುತ್ಟಸ್ವಾಮಿ "ಯಡಿಯೂರಪ್ಪ  ತನ್ನೊಂದಿಗೆ ನಡೆಸೊದ ಮಾತುಕತೆ, ನೀಡಿದ ಆದೇಶವನ್ನು ಮನ್ನಿಸಿರುವ ನಾನು ಪ್ರಧಾನಿ ಮೋದಿ ಅವರ ಕಾರ್ಯಕ್ಷಮತೆಯನ್ನು ಬೆಂಬಲಿಸುವುದರೊಡನೆ ಜೂನ್ 18ರಂದು ತಾನು ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ಇದ್ದ ಪುತ್ತಸ್ವಾಮಿ ಇದಕ್ಕೆ ಅವಕಾಶ ದೊರಕದೆ ಹೋದಾಗ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.ಅದಲ್ಲದೆ ಪಕ್ಷದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ಅಂಗೀಕರಿಸದ ಯಡಿಯೂರಪ್ಪ ಎರಡು ತಿಂಗಳ ಬಳಿಕ ಅವರ ಮನವೊಲಿಸಿ ಮತ್ತೆ ಪದವಿಯಲ್ಲಿ ಮುಂದುವರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
SCROLL FOR NEXT