ರಂಗೇರಿದ ಸ್ಥಳೀಯ ಸಂಸ್ಥೆ ಚುನಾವಣೆ
ಬೆಂಗಳೂರು: ಆಗಸ್ಟ್ 31 ರಂದು 105 ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರು ತಳ ಮಟ್ಟದ ನಾಯಕರು ಅವಿರತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಹಾಗೂ ಮೂರು ಪಕ್ಷದ ಶಾಸಕರು, ಈ ಸ್ಥಳೀಯ ಸಂಸ್ಥೆ ಚುನಾವಣೆ ಭವಿಷ್ಯ ನಿರ್ಧರಿಸಲಿದ್ದಾರೆ.
ಈಗಾಗವಲೇ ವಿಧಾನ ಸಭೆ ಚುನಾವಣೆ ಮುಗಿದಿದ್ದು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದೆ. 2013 ರಲ್ಲಿ 208 ನಗರ ಸ್ಥಳೀಯ ಸಂಸ್ಥೆ. ಮುನಿಸಿಪಲ್ ಕಾರ್ಪೋರೇಷನ್ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆ ಚುನಾವಣೆಗೂ 12 ತಿಂಗಳ ಮುನ್ನ ಎಲೆಕ್ಷನ್ ನಡೆದಿತ್ತು. ಆಗ ಫಲಿತಾಂಶ ಕಾಂಗ್ರೆಸ್ ಪರವಾಗಿತ್ತು, ಆದರೆ ಈ ಬಾರಿ ಸಮಯ ಭಿನ್ನವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿ ಸರ್ಕಾರ ಅಸ್ಥಿತ್ವದಲ್ಲಿದ್ದು ಸ್ತಳೀಯ ಸಂಸ್ಥೆ ಚುನಾವಣೆಗೆ ಮತ್ತಷ್ಟು ರಂಗೇರಿದೆ. ಜೊತೆಗೆ ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದೆ.
ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಮೂರು ತಂಡಗಳನ್ನು ರಚಿಸಿದೆ. ಯಡಿಯೂರಪ್ಪ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಚನೆಯಾಗಿರುವ ತಂಡ ಪ್ರಚಾರ ನಡೆಸುತ್ತಿದೆ. ಜೊತೆಗೆ ಶಾಸಕರನ್ನು ಹಲವು ಜಿಲ್ಲೆಗಳು ಉಸ್ತುವಾರಿಯಾಗಿ ನೇಮಿಸಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಹಾಗೂ ಜಿಲ್ಲಾದ್ಯಕ್ಷರು ಈ ಬಾರಿಯ ಚುನಾವಣೆಗೆ ಹೊಣೆಯಾಗಿದ್ದಾರೆ.
ಇನ್ನೂ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಟ್ಟರೇ ಬೇರೆ ಯಾವುಜೇ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಎಲ್ಲಾ ಜಿಲ್ಲೆಗಳ ಸ್ಥಳೀಯ ನಾಯಕರು ತಮ್ಮ ಊರುಗಳಿಗೆ ಬಂದು ಪ್ರಚಾರ ಮಾಡಲು ಕೇಳುತ್ತಾರೆ ಎಂಬ ಕಾರಣದಿಂದ ಪ್ರಮುಖ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ.
ಆಗಸ್ಟ್ 31 ರಂದು ನಡೆಯುವ ಚನಾವಣೆಯನ್ನು ಮೂರು ಪಕ್ಷಗಳ ನಾಯಕರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ .
2013 ರಲ್ಲಿ ಜೆಡಿಎಸ್ ಶೇ. 18 ರಷ್ಚು ಮತ ಪಡೆದಿತ್ತು, ಸಮಯದ ಅಭಾವದಿಂದ ನಾನು ಪ್ರಚಾರ ಮಾಡಲಾಗಲಿಲ್ಲ, ನಮ್ಮ ನಾಯಕರುಗಳೇ ಅದರ ಚುನಾವಣೆ ನೋಡಿಕೊಳ್ಳುತ್ತಾರೆ. ಹೆಚ್ಚಿನ ಸೀಟು ನಮಗೆ ಬರುತ್ತದೆ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos