ಸಂಗ್ರಹ ಚಿತ್ರ 
ರಾಜಕೀಯ

ಸಂಪುಟ ವಿಸ್ತರಣೆ ಕಗ್ಗಂಟು: ಡಿ.5ಕ್ಕೆ ಸಮನ್ವಯ ಸಮಿತಿ ಸಭೆ

ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಗೊಂದಲದಲ್ಲಿದ್ದ ಕಾಂಗ್ರೆಸ್ ನಾಯಕತ್ವವವನ್ನು ಬಿಜೆಪಿಯ ಸೆಳೆತಕ್ಕೆ ಸಿಲುಕಿರುವ ಪಕ್ಷದ ಶಾಸಕರ ಅತೃಪ್ತಿ ಸ್ಫೋಟದ ಸಾಧ್ಯತೆ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಸಂಪುಟ ವಿಸ್ತರಣೆ ಎಂಬ...

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಗೊಂದಲದಲ್ಲಿದ್ದ ಕಾಂಗ್ರೆಸ್ ನಾಯಕತ್ವವವನ್ನು ಬಿಜೆಪಿಯ ಸೆಳೆತಕ್ಕೆ ಸಿಲುಕಿರುವ ಪಕ್ಷದ ಶಾಸಕರ ಅತೃಪ್ತಿ ಸ್ಫೋಟದ ಸಾಧ್ಯತೆ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಸಂಪುಟ ವಿಸ್ತರಣೆ ಎಂಬ ಎರಡು ಅಲಗಿನ ಕತ್ತಿಯನ್ನು ಯಾವಾಗ ಪ್ರಯೋಗ ಮಾಡಬೇಕೆಂಬ ಗೊಂದಲ ಕಾಂಗ್ರೆಸ್ ಪಕ್ಷವನ್ನು ಕಾಡತೊಡಗಿದೆ. 
ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಬೇಕೆಂಬ ಒತ್ತಡ ಆಡಳಿತಾರೂಢ ಪಕ್ಷದ ಮೇಲಿದ್ದು, ಈ ಒತ್ತಡಕ್ಕೆ ತಲೆಬಾಗಿದರೆ ಅಧಿವೇಶನದ ವೇಳೆ ಸಚಿವ ಸ್ಥಾನ ವಂಚಿತರ ಆಕ್ರೋಶ ಹಾಗೂ ಭಿನ್ನಮತೀಯ ಚಟುವಟಿಕೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಶಾಸಕರು ಲಭ್ಯರಾಗುವ ಕಾರಣ ಅವರ ಆಪರೇಷನ್ ನಡೆಸಲು ಬಿಜೆಪಿಗೆ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ ಎಂಬ ಭೀತಿ ಕೂಡ ಕಾಂಗ್ರೆಸ್'ಗೆ ಎದುರಾಗಿದೆ. 
ಸಂಪುಟ ವಿಸ್ತರಣೆಯನ್ನು ಮುಂದೂಡಿದರೆ ಅತೃಪ್ತ ಶಾಸಕರ ಸಂಖ್ಯೆ ಕೂಡ ಹೆಚ್ಚಳವಾಗಿ ಬಿಜೆಪಿ ಬಯಸುತ್ತಿರುವ ಸಂಖ್ಯೆಯನ್ನು ಮುಟ್ಟುವ ಆತಂಕವೂ ನಾಯಕರಿಗಿದೆ. 
ಈ ಹಿನ್ನಲೆಯಲ್ಲಿ ಡಿ.5 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಈ ಸಭೆ ಅತ್ಯಂತ ಮುಖ್ಯವಾಗಿ ಮಾರ್ಪಟ್ಟಿದೆ. 
ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಇನ್ನು ಕಾಂಗ್ರೆಸ್ ಶಾಸಕರು ಸಿಡಿದೆದ್ದರೆ ಅದು ಸರ್ಕಾರ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣ ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನಗೊಳಿಸುವ ಅಗತ್ಯವಿದೆ. ಹೀಗಾಗಿಯೇ ಡಿ.8 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾನಿಯವರನ್ನು ಆಹ್ವಾನಿಸಲಾಗಿದೆ. ಈ ಎರಡು ಸಭೆಗಳಲ್ಲಿ ಕಾಂಗ್ರೆಸೆ ಶಾಸಕರನ್ನು ಸಮಾಧಾನಗೊಳಿಸುವ ಪ್ರಯತ್ನಗಳು ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ