ರಾಜಕೀಯ

ಪಂಚರಾಜ್ಯಗಳ ಫಲಿತಾಂಶ: ರಾಜ್ಯ ಬಿಜೆಪಿಯಲ್ಲಿ ತಳಮಳ, ಲೋಕಸಭಾ ಚುನಾವಣೆಗೆ ಸಿದ್ಧತೆ

Nagaraja AB

ಬೆಂಗಳೂರು: ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಡ , ಮಿಜೋರಾಂ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣಾ  ಫಲಿತಾಂಶ  ರಾಜ್ಯ  ಬಿಜೆಪಿಯಲ್ಲಿ  ತಳಮಳಕ್ಕೆ ಕಾರಣವಾಗಿದ್ದು,  ಮುಂದಿನ ಲೋಕಸಭಾ ಚುನಾವಣೆಯತ್ತ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಪಂಚ ರಾಜ್ಯಗಳ  ಚುನಾವಣೆಯಲ್ಲಿ  ಮೋದಿ ಅಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ ಅಂಶವನ್ನು  ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಮುನ್ನೆಲೆಗೆ ತರುವ ಸಾಧ್ಯವಿರುವುದರಿಂದ ಬಿಜೆಪಿ ರಾಜ್ಯದಲ್ಲಿ ಪರಿಪೂರ್ಣ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕೆಂಬ ಸಲಹೆಯನ್ನು ಪಕ್ಷದೊಳಗಿನ ನಾಯಕರು  ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಕರ್ನಾಟಕದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದ ಬಿಜೆಪಿ ಈಗ  ಮಧ್ಯಪ್ರದೇಶ, ಛತ್ತೀಸ್  ಗಢ  ಹಾಗೂ ರಾಜಸ್ತಾನದ ಚುನಾವಣೆಯಲ್ಲಿ ಈಗ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಸಹಜವಾಗಿಯೇ ಬಿಜೆಪಿಗೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ.

ಸ್ಥಳೀಯ ಆಡಳಿತ ವಿರೋಧಿ ಅಲೆ ಈ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಆದರೆ, ಇದು ಮೈತ್ರಿ ಆಟ ಗೆದ್ದಂತಲ್ಲಾ  ಈ ರಾಜ್ಯಗಳಲ್ಲಿಯೂ ಎಲ್ಲಿಯೂ ಮೈತ್ರಿ ಪರ ಮತದಾರರು ಒಲವು ತೋರಿಲ್ಲ ಎಂದು ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಬಗ್ಗೆ ಬಿಜೆಪಿ ನಾಯಕರು ಅನುಮಾನ ಹೊಂದಿದ್ದು,  ಪಕ್ಷ ಸದೃಢಗೊಳಿಸುವತ್ತ ಚಿಂತನೆ ನಡೆಸಿದ್ದಾರೆ. ಈಗ ಅಲ್ಲದಿದ್ದರೂ 2023 ರಲ್ಲಿ ಹೋರಾಟ ನಡೆಸುತ್ತೇವೆ. ಸದ್ಯ 2019 ರ ಲೋಕಸಭಾ ಚುನಾವಣೆಯತ್ತ ಗಮನ ಹರಿಸುವುದಾಗಿ ಬಿಜೆಪಿಯ ಕಾರ್ಯಕಾರಿ ಪದಾಧಿಕಾರಿಯೊಬ್ಬರು  ಹೇಳಿದ್ದಾರೆ.

ಆಡಳಿತ ವಿರೋಧಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಮೋದಿ ಅಲೆಯಿಂದ ಮತ್ತಷ್ಚು ಬೀರಬಹುದಾಗಿದ್ದ ಪರಿಣಾಮವನ್ನು ತಗ್ಗಿಸಿದೆ. ಆದ್ದರಿಂದಲೇ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ವಿವೇಕ್ ರೆಡ್ಡಿ ಹೇಳಿದ್ದಾರೆ.

ಕರ್ನಾಟಕ ಬಿಜೆಪಿ ಘಟಕ ಈಗ ಮುಂಬರುವ ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸಿದ್ದು, ಪಕ್ಷ ಬಲಗೊಳಿಸುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದೆ.

SCROLL FOR NEXT