ತಿರುಪತಿ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಹೊಸದೊಂದು ದಾವೆ ಹೂಡಿದ್ದು ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನ್ಯಾಯಾಂಗದಿಂದ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ದಶಗಳ ಹಳೆಯ ವಿವಾದಕ್ಕೆ ನ್ಯಾಯಾಂಗದಿಂದ ಶಾಶ್ವತ ಪರಿಹರಿಸಲ್ಪಡುವುದಿಲ್ಲ. ಬದಲಿಗೆ ಎರಡು ರಾಜ್ಯಗಳ ನಡುವಿನ ಮಾತುಕತೆ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಕನ್ನಡಿಗರು ಮತ್ತು ತಮಿಳರು ವೈರಿಗಳಲ್ಲ. ರಾಜ್ಯದ ನದಿ ನೀರನ್ನು ವಿಪರೀತ ಒಳಹರಿವು ಮತ್ತು ಕಷ್ಟದ ಪರಿಸ್ಥಿತಿಯ ಸಮಯದಲ್ಲಿ ಹಂಚಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕರ್ನಾಟಕದಿಂದ ಮೇಕೆದಾಟು ಬಳಿ ಜಲಾಶಯ ನಿರ್ಮಿಸುವ ಪ್ರಸ್ತಾಪ ಬಂದ ನಂತರ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಇದೀಗ ಕಾವೇರಿ ವಿಚಾರವಾಗಿ ಮತ್ತೆ ಮುಖಾಮುಖಿಯಾಗುತ್ತಿವೆ. ಇನ್ನು ಮೇಕೆದಾಟು ಬಳಿ ಜಲಾಶಯ ನಿರ್ಮಿಸುವುದರಿಂದ ತನ್ನ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ ಎಂದು ತಮಿಳುನಾಡು ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಿದೆ.
ರಾಜ್ಯ ಸರ್ಕಾರ ನೀಡಿದ್ದ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡದ ಬಳಿಕ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿತ್ತು. ಸದ್ಯ ಮಟ್ಟಿಗೆ ಸುಪ್ರೀಂ ಕೋರ್ಟ್ ತಾಳ್ಮೆಯಿಂದಿರುವಂತೆ ತಮಿಳುನಾಡಿಗೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics