ನವದೆಹಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಜಯಭೇರಿ ಬಾರಿಸಿದ್ದ ಆನಂದ್ ಸಿಂಗ್ ಅವರನ್ನು ತನ್ನತ್ತ ಸೆಳೆದುಕೊಂಡ ಕಾಂಗ್ರೆಸ್'ಗೆ ಬಿಜೆಪಿ ಸೆಡ್ಡು ಹೊಡೆದಿದ್ದು, ಬಳ್ಳಾರಿಯ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಅವರನ್ನು ತನ್ನತ್ತ ಸೆಳೆದುಕೊಂಡಿದೆ.
ಇದೇ ವೇಳೆ ಮಾಜಿ ಸಚಿವ ಎಂ.ವೈ ಘೋರ್ಪಡೆ ಪುತ್ರ ಕಾರ್ತಿಕೇಯ ರಾಜೇ ಘೋರ್ಪಡೆ ಕೂಡ ಬಿಜೆಪಿಗೆ ಸೋವಾರ ಸೇರ್ಪಡೆಗೊಂಡಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಆನಂದ್ ಸಿಂಗ್ ವಿರುದ್ಧ ಸ್ಪರ್ಧಿಸಿ ಗವಿಯಪ್ಪ ಅವರು ಪರಾಭವಗೊಂಡಿದ್ದರು. ದೆಹಲಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವಾರದ ಅನಂತ್ ಕುಮಾರ್, ಡಿ.ವಿ. ಸದಾನಂದ ಗೌಡ, ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜವಡೇಕರ್ ಮತ್ತು ಬಳ್ಳಾರಿ ಸಂಸದ ಶ್ರೀ ರಾಮುಲು ಅವರ ಸಮ್ಮುಖದಲ್ಲಿ ಇಬ್ಬರೂ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು, ಜವಡೇಕರ್ ಅವರು ಇಬ್ಬರು ನಾಯಕರಿಗೂ ಪಕ್ಷದ ಪ್ರಾಥಮಿತ ಸದಸ್ಯತ್ವ ನೀಡಿದರು.
ಗವಿಯಪ್ಪ ಅವರು ಹೊಸಪೇಟೆ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಹೊಸಪೇಟೆ ಶಾಸಕರಾಗಿದ್ದ ಆನಂತ್ ಸಿಂಗ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ವಿಧಾನಸಬೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುವುದು ಖಚಿತವಾದ ಹಿನ್ನಲೆಯಲ್ಲಿ ಗವಿಯಪ್ಪ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆಂದು ತಿಳಿದುಬಂದಿದೆ.