ಬೆಂಗಳೂರು: ವ್ಯಕ್ತಿಯೊಬ್ಬರು ಬಳಸುವ ಭಾಷೆ ಅವರ ವ್ಯಕ್ತಿತ್ವ ಹೇಳುತ್ತದೆ.ಮುಖ್ಯಮಂತ್ರಿ ವಿರುದ್ದ 'ನೀಚ' ಪದ ಬಳಕೆ ಮಾಡಿದ್ದ ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಸಂಬಂಢ ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ.
ಶನಿವಾರ ಕೆಂಗೇರಿಯಲ್ಲಿ ನಡೆದಿದ್ದ ಜೆಡಿಎಸ್ ರ್ಯಾಲಿಯಲ್ಲಿ ಮಾತನಾಡುತ್ತಾ ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಟು ವಾಕ್ಯದಲ್ಲಿ ಟೀಕಿಸುತ್ತಾ ಅವರೊಬ್ಬ 'ನೀಚ' ಎಂದು ಹೇಳಿದ್ದರು.
ಜನಾಶೀರ್ವಾದ ಯಾತ್ರೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಟೀಕೆಗಳಿಗೆ ಪ್ರತಿಕ್ರಯಿಸಲು ಟ್ವಿಟ್ಟರ್ ಮೊರೆ ಹೋಗಿದ್ದಾರೆ. "ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು, ದಲಿತರ ಹಕ್ಕುಗಳಿಗಾಗಿ ನೀವು ಹೋರಾದಾಗ, ಮೇಲ್ವರ್ಗದ ಜನರು ಅಸಮಾಧಾನಗೊಳ್ಳುತ್ತಾರೆ. ಮತ್ತು ನಿಮ್ಮನ್ನು ಕೆಟ್ಟದಾಗಿ ಸಂಬೋಧಿಸುತ್ತಾರೆ. ನೀವು ಎರಡನೇ ಬಾರಿ ಫ್ಯೂಡಲ್ ಪದ್ದತಿ ಜಾರಿಉಯಾಗುವುದನ್ನು ವಿರೋಧಿಸಿದಾಗ ಅವರು ನಿಮ್ಮನ್ನು ನಿಂದಿಸಲಿದ್ದಾರೆ. ನಾನು ಇಂತಹಾ ನಿಂದನೆಗಳನ್ನು ಪ್ರಶಸ್ತಿ ಎಂದು ಸ್ವೀಕರಿಸುತ್ತೇನೆ." ಪತ್ರಿಕೆಯೊಂಡರ ತುಣುಕನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದ ಸಿದ್ದರಾಮಯ್ಯ ಮೇಲಿನಂತೆ ಬರೆದುಕೊಇಂಡಿದ್ದಾರೆ.
ಇದಕ್ಕೂ ಮುಂಚೆ, ವ್ಯಕ್ತಿಯೊಬ್ಬನ ಭಾಷೆ ಅಥವಾ ಮಾತುಗಳು ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ ಎಂದು ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದರು. "ಪ್ರತಿಕ್ರಿಯೆಗಳಲ್ಲಿ ಹಿರಿಅರದು, ಕಿರಿಯರದೆಂದು ವ್ಯತ್ಯಾಸವಿಲ್ಲ. ನಮ್ಮ ಮೇಲಿನ ಪ್ರತಿಕ್ರಿಯೆಗಳನ್ನು ನಾವು ಒಪ್ಪಿಕೊಂಡರೆ ಅದು ನಮ್ಮದು, ಒಪ್ಪಿಕೊಳ್ಳದೆ ಹೋದರೆ ಅದು ಅವರದಾಗಿರುತ್ತದೆ" ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ..
ಈ ಮುನ್ನ ಮಹಾಮಾಸ್ತಕಭಿಷೇಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲು ಅವಕಾಶ ತಮಗೆ ನೀಡಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಒಬ್ಬ 'ನೀಚ' ಎಂದು ಕರೆದಿದ್ದು ಅವನನ್ನು ಮುಂಚೂಣಿಯ ನಾಯಕರನ್ನಾಗಿ ರೂಪಿಸಿ ನಾನು ತಪ್ಪು ಮಾಡಿದ್ದೇನೆ ಎಂದು ಅವರು ಹೇಳಿದ್ದರು.