ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಮೇ 15 ರಂದು ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳಿಂದ ತಿಳಿದುಬಂದಿದೆ.
ಏಪ್ರಿಲ್ ಮಧ್ಯಭಾಗದಲ್ಲಿ ನವದೆಹಲಿಯಲ್ಲಿ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಬಿಡುಗಡೆಯಾಗಲಿದೆ.
ಏಪ್ರಿಲ್ ಮುಂಚಿತವಾಗಿಯೇ ಮೂವರು ಚುನಾವಣಾ ಆಯುಕ್ತರು ಬೆಂಗಳೂರು , ಮತ್ತಿತರ ನಗರಗಳಿಗೆ ಭೇಟ ನೀಡಿ, ಚುನಾವಣಾ ಪೂರ್ವ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ 14ನೇ ವಿಧಾನಸಭೆಯ ಅವಧಿ ಮೇ 28ಕ್ಕೆ ಮುಕ್ತಾಯವಾಗಲಿದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸದನ ಅಸ್ತಿತ್ವಕ್ಕೆ ಬರಬೇಕಾಗಿದೆ.
ಮಾರ್ಚ್ ಅಂತ್ಯದೊಳಗೆ ಶಾಲಾ ಪರೀಕ್ಷೆಗಳು ಹಾಗೂ ಏಪ್ರೀಲ್ 14ರೊಳಗೆ ಇನ್ನಿತರ ಪರೀಕ್ಷೆಗಳು ಮುಗಿಯುವ ಸಾಧ್ಯತೆ ಇದ್ದು,
ಏಪ್ರಿಲ್ 15 ರೊಳಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನುವಂತಹ ಮಾಹಿತಿ ತಿಳಿದುಬಂದಿದೆ.