ಪ್ರಕಾಶ್ ರೈ ಮತ್ತು ಪ್ರತಾಪ್ ಸಿಂಹ
ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ 1 ರೂ. ಪರಿಹಾರ ಕೊಡಿಸುವಂತೆ ನಟ ಪ್ರಕಾಶ್ ರೈ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಒಂದು ರೂ. ಪರಿಹಾರ ಕೋರಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ನಟ ಪ್ರಕಾಶ್ ರೈ ಸಮಾಜದಲ್ಲಿ ತನ್ನ ಮಾನ ಮರ್ಯಾದೆ ಮೌಲ್ಯ ಏನು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
''ಅವರಿಗಿರುವ ಮಾನ -ಮರ್ಯಾದೆಗೆ ಒಂದು ರೂ. ಕೂಡಾ ಹೆಚ್ಚೇ ಆಗಿದೆ. ಆದರೂ ಪರವಾಗಿಲ್ಲ, ರೈಗೆ ತನ್ನ ಮಾನ- ಮರ್ಯಾದೆ ಮೌಲ್ಯ ಒಂದು ರೂ. ಎಂದು ಅರಿವಿಗೆ ಬಂದಿರುವುದು ಖುಷಿಯ ವಿಚಾರ,'' ಎಂದು ವ್ಯಂಗ್ಯವಾಡಿದ್ದಾರೆ. ಪ್ರಕಾಶ್ ರೈಗೆ ಮೂರು ಪೈಸೆ ಬೆಲೆಯೂ ಇಲ್ಲ, ಅವರಿಗೆ 1 ರು ಪರಿಹಾರ ಕೂಡ ಹೆಚ್ಚಾಯಿತು ಎಂದು ವ್ಯಂಗ್ಯವಾಡಿದ್ದಾರೆ,.
''ನಾನು ಇಲ್ಲಿ ಇಲ್ಲದ ವೇಳೆ ದೆಹಲಿಯಿಂದ ನನಗೆ ಲೀಗಲ್ ನೋಟಿಸ್ ಬಂದಿತ್ತು. ಅದು ದೆಲ್ಲಿಯ ಜುಬಿಲಿ ಹಿಲ್ಸ್, ಪ್ರಕಾಶ್ ರಾಜ್ ಹೆಸರಲ್ಲಿ ಬಂದಿತ್ತು. ಆಗ ನನಗೆ ಹೆಸರು ಗೊಂದಲವಾಗಿ, ಅವರ ಹೆಸರು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ಯಾವುದು ಎಂದು ಸ್ಪಷ್ಟ ಪಡಿಸುವಂತೆ ಕೇಳಿದ್ದೆ. ಇವರು ಸಿನಿಮಾದಲ್ಲಿ ಹೆಸರು ಬದಲಿಸುವಂತೆ ನಿಜ ಜೀವನದಲ್ಲೂ ಊರಿಗೊಂದು ಹೆಸರು ಇಟ್ಟುಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿಗೆ ಬಂದೂ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ,'' ಎಂದು ವಾಗ್ದಾಳಿ ನಡೆಸಿದರು.
ಪ್ರಕಾಶ್ ರೈ ಸಿನಿಮಾದಲ್ಲಿ ಮಾತ್ರ ವಿಲ್ಲನ್ ಪಾತ್ರ ಮಾಡುವುದಿಲ್ಲ, ನಿಜ ಜೀವನದಲ್ಲೂ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು,ಮೊದಲು ನೀವು ಕನ್ನಡಿಗನ ಅಲ್ಲವಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದ್ದಾರೆ.
'ನಾನು ಯಾರ ವಿಚಾರದಲ್ಲೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ಪ್ರಕಾಶ್ ರೈ ಒಮ್ಮೆ ಮೋದಿ ಅವರು ದೊಡ್ಡ ನಟ ಎಂದು ಟೀಕಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ವಿರುದ್ಧ ವ್ಯಕ್ತಿಯೊಬ್ಬರು ಬರೆದಿದ್ದರು. ಅದನ್ನು ಶೇರ್ ಮಾಡಿದೆ ಅಷ್ಟೆ. ಹಾಗಾಗಿ ದಾವೆ ಹೂಡಬೇಕಾಗಿರುವುದು ನನ್ನ ವಿರುದ್ಧ ಅಲ್ಲ,''ಎಂದು ತಿಳಿಸಿದ್ದಾರೆ.
''ನಾನು ಸಿಎಂ ತವರು ಜಿಲ್ಲೆಯಲ್ಲೇ ಸ್ಪರ್ಧಿಸಿ ಸಂಸದನಾಗಿದ್ದೇನೆ. ಪ್ರಕಾಶ್ ರೈ ಕಾಂಗ್ರೆಸ್ ನಿಂದ ಟಿಕೆಟ್ ಪಡೆದಪ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.ಪ್ರಕಾಶ್ ರೈ ಅವರು ಅನಂತಕುಮಾರ್ ಹೆಗಡೆ, ವಿರುದ್ಧವು ಮಾತನಾಡಿದ್ದಾರೆ.ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ, ಗೃಹಸಚಿವರನ್ನು ಪ್ರಶ್ನಿಸುವ ಬದಲು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರೆ ಏನರ್ಥ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics