ಎಚ್ ಡಿ ಕುಮಾರಸ್ವಾಮಿ 
ರಾಜಕೀಯ

ನಾನೇ ಕಿಂಗ್ ಆಗ್ತಿನಿ, ಕಿಂಗ್ ಮೇಕರ್ ಅಲ್ಲ: ಬ್ರಿಟನ್ ರಾಯಭಾರಿಗೆ ಎಚ್ ಡಿಕೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಕಿಂಗ್‌ ಆಗಲು ಬಯಸುತ್ತೇನೆ. ಆದರೆ ಕಿಂಗ್ ಮೇಕರ್ ಆಗುವುದಿಲ್ಲ ಎಂದು ಜೆಡಿಎಸ್...

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಕಿಂಗ್‌ ಆಗಲು ಬಯಸುತ್ತೇನೆ. ಆದರೆ ಕಿಂಗ್ ಮೇಕರ್ ಆಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಆಹ್ವಾನದ ಮೇರೆಗೆ ಕುಮಾರಸ್ವಾಮಿ ನಿವಾಸಕ್ಕೆ ಬೆಳಗಿನ ಉಪಹಾರಕ್ಕಾಗಿ ಆಗಮಿಸಿದ್ದ ಬ್ರಿಟನ್‌ ‌ನ ಭಾರತದ ರಾಯಭಾರಿ ಅಲೆಕ್ಸಾಂಡರ್ ಇವಾನ್ಸ್‌ ಅವರು, ಒಂದು ವೇಳೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, ನಾನು ಕಿಂಗ್ ಮೇಕರ್ ಆಗಲ್ಲ. ಕಿಂಗ್ ಆಗಲು ಬಯಸುತ್ತೇನೆ ಎಂದು ಎಚ್ ಡಿಕೆ ತಿಳಿಸಿದ್ದಾರೆ.
ನನ್ನ ಪ್ರಕಾರ, ರಾಜ್ಯದ ರೈತರು ಜೆಡಿಎಸ್ ಪರವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆಯಯಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ರಾಯಭಾರಿ ಇವಾನ್ಸ್ ಅವರೊಂದಿಗೆ ಬೆಂಗಳೂರಿನಲ್ಲಿರುವ ಉಪ ರಾಯಭಾರಿ ಮ್ಯಾಕ್ ಅಲೆಸ್ಟರ್ ಮತ್ತು ಬ್ರಿಟನ್ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಅಲೆಕ್ಸ್ ಕ್ಯಾಮರೂನ್ ಕೂಡಾ ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?

ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!

'ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಕೊಡಬೇಡಿ': ಟ್ರಂಪ್‌ಗೆ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಸಲಹೆ!

ಸಿಎಂ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಆಕ್ರೋಶಿತ ಭಕ್ತರಿಂದ ಚಪ್ಪಲಿ ಎಸೆತ, Video!