ಸಿದ್ದರಾಮಯ್ಯ 
ರಾಜಕೀಯ

ಕಾಂಗ್ರೆಸ್ 70 ವರ್ಷದಿಂದ ಹಿಂದೂ ಧರ್ಮವನ್ನು ರಕ್ಷಿಸಿದೆ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಮಾತ್ರ ಹಿಂದೂ ಧರ್ಮದ ರಕ್ಷಕರಾ? ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ 70 ವರ್ಷದಿಂದ ಕಾಂಗ್ರೆಸ್ ಹಿಂದೂ ಧರ್ಮದ ರಕ್ಷಣೆ ಮಾಡಿದೆ ಎಂದು ಮಂಗಳವಾರ ತಿರುಗೇಟು ನೀಡಿದ್ದಾರೆ...

ಬೆಂಗಳೂರು: ಬಿಜೆಪಿಯವರು ಮಾತ್ರ ಹಿಂದೂ ಧರ್ಮದ ರಕ್ಷಕರಾ? ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ 70 ವರ್ಷದಿಂದ ಕಾಂಗ್ರೆಸ್ ಹಿಂದೂ ಧರ್ಮದ ರಕ್ಷಣೆ ಮಾಡಿದೆ ಎಂದು ಮಂಗಳವಾರ ತಿರುಗೇಟು ನೀಡಿದ್ದಾರೆ.
ಇಂದು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ, ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರು ಹಿಂದೂತ್ವ ಎನ್ನುತ್ತಾರೆ. ಬಿಜೆಪಿಯವರಿಗೆ ಈಗ ಏನೂ ಉಳಿದಿಲ್ಲ, ಹಿಂದೂತ್ವ ಒಂದೇ ಉಳಿದಿರುವುದು ಎಂದು ವ್ಯಂಗ್ಯವಾಡಿದರು.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಾವು ಸುಳ್ಳು ಹೇಳೋದು ಬೇಡ, ಸತ್ಯವನ್ನೇ ಹೇಳೋಣ, ಸುಳ್ಳು ಹೇಳೋದು ಬಿಜೆಪಿಯವರ ಕೆಲಸ ಎಂದು ಆರೋಪಿಸಿದರು.
ಬಿಜೆಪಿಯವರ ಆರೋಪಕ್ಕೆ ನಾವು ಕಟುವಾಗಿ ತಿರುಗೇಟು ನೀಡಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಕಾರ್ಯಾಗಾರ ಮಾಡಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಬಿಜೆಪಿಯಿಂದ ಆಪರೇಷನ್ ಕಮಲ ಯತ್ನ: ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ಆಮಿಷ: ಡಿ.ಕೆ ಶಿವಕುಮಾರ್

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ; ಇರಾನ್‌ಗೆ ಮುಖಭಂಗ; Video

'ಒಂದು ವೇಳೆ ಬದುಕಿದ್ದರೆ, ಹುಡುಕಿ ಕೊಲ್ಲುತ್ತೇವೆ': ಬೆಂಜಮಿನ್ ನೆತನ್ಯಾಹು ಸಾವಿನ ವದಂತಿಗಳ ನಡುವೆ ಇರಾನ್ ಎಚ್ಚರಿಕೆ!

ಯುದ್ಧ: ಮೊದಲ ಬಾರಿಗೆ Dancing Missile ಉಡಾಯಿಸಿದ Iran; 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

SCROLL FOR NEXT