ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರ್ಯೋಧನನಂತೆ ವರ್ತಿಸುತ್ತಿದ್ದಾರೆ. ಅವರ ಹಾವಭಾವಗಳು ಮಹಾಭಾರತದ ದುರ್ಯೋಧನನ ಪಾತ್ರ ಹೋಲುತ್ತವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದ ಸಿಟಿ ರವಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ನಿಶ್ವಿತವಾಗಿಯೂ ಕೌರವರ ಸರ್ಕಾರ, ಅದರ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ದುರ್ಯೋಧನನಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯೆಂಬ ಕುರುಕ್ಷೇತ್ರ ಯುದ್ಧದಲ್ಲಿ ಕಾಂಗ್ರೆಸ್‌ನವರು ಪಾಂಡವರ ಪಕ್ಷ, ಬಿಜೆಪಿಯವರು ಕೌರವರ ಪಕ್ಷ ಎಂದು ಹೇಳಿದ್ದಾರೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅತಿಹೆಚ್ಚು ಭ್ರಷ್ಟಾಚಾರ, ಅತ್ಯಾಚಾರ, ಹತ್ಯೆಗಳು, ಕೋಮುಗಲಭೆಗಳು ನಡೆದಿವೆ. ಹೀಗಿರುವಾಗ, ಕಾಂಗ್ರೆಸ್ ಪಾಂಡವರ ಪಕ್ಷವಾಗಲು ಹೇಗೆ ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಶಾಸಕ ಸಿಟಿ ರವಿ ಸವಾಲು ಹಾಕಿದರು.
ಪಾಂಡವರು ಇರುವ ಕಡೆ ಶ್ರೀಕೃಷ್ಣ ಇರುತ್ತಾನೆ. ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಲು ನಿಮಗೆ ಮನಸ್ಸಿಲ್ಲ. ಶ್ರೀಕೃಷ್ಣ ವಿರೋಧಿಯಂತೆ ವರ್ತನೆ ಮಾಡಿದ ನೀವು ಪಾಂಡವರಾಗಲು ಹೇಗೆ ಸಾಧ್ಯ? ಎಂದು ಸಿಟಿ ರವಿ ಸಪ್ರಶ್ನಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos