ಕುಂದಾಪುರ: ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ಶಾಸಕರಾಗಿದ್ದ ಶ್ರೀನಿವಾಸ ಶೆಟ್ಟಿ ತಮ್ಮ ಶಾಸಕ ಸ್ಥಾನದ ಅವಧಿ ಮುಗಿಯುವ ಮುನ್ನ ರಾಜೀನಾಮೆ ನೀಡಲು ನಿರ್ಧರಿಸಿದ್ದು ಅದಕ್ಕಾಗಿ ಸ್ಪೀಕರ್ ಕೋಳಿವಾಡ ಭೇಟಿಯಾಗಲು ರಾಣಿಬೆನ್ನೂರಿಗೆ ತೆರಳಿದ್ದಾರೆ.
ಶಾಸಕರು ತಾವು ಮತ್ತೆ ಮಾತೃಪಕ್ಷ ಬೆಜೆಪಿ ಸೇರುವುದಕ್ಕಾಗಿ ಸಿದ್ದತೆ ನಡೆಸಿದ್ದು ಫೆ. 4ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ನಿಷ್ಕಳಂಕ ರಾಜಕಾರಣಿ, ಸರಳ ವ್ಯಕ್ತಿಯಾಗಿದ್ದು ಅಪಾರ ಜನ ಬೆಂಬಲ ಹೊಂದಿರುವ ಶ್ರೀನಿವಾಸ ಶೆಟ್ಟಿಯವರನ್ನು ಕುಂದಾಪುರದ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇದಾಗಲೇ ಘೋಷಣೆ ಮಾಡಿದ್ದಾರೆ.